ಈ ವರ್ಷ ಒಂದೇ ಸಲ ನೀಟ್ ಪರೀಕ್ಷೆ: ಶಿಕ್ಷಣ ಸಚಿವ ಪೋಖ್ರಿಯಾಲ್

ಹೊಸದಿಲ್ಲಿ,ಮಾ.15: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು ಪದವಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ಈ ವರ್ಷ ಒಂದು ಸಲ ಮಾತ್ರ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಷಾಂಕ ಅವರು ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಎನ್‌ಟಿಎ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲದೊಂದಿಗೆ ಸಮಾಲೋಚಿಸಿ ವೈದ್ಯಕೀಯ ವಿಜ್ಞಾನಗಳಲ್ಲಿ ಪದವಿ ತರಗತಿಗಳಿಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯನ್ನು ನಡೆಸುತ್ತದೆ. ಪ್ರಸಕ್ತ ವರ್ಷದಿಂದ ಎರಡು ಸಲ ನೀಟ್ ಪರೀಕ್ಷೆ ನಡೆಸುವ ಪ್ರಸ್ತಾವವಿತ್ತಾದರೂ,ಈ ಸಂಬಂಧ ತನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಎನ್‌ಟಿಎ ತಿಳಿಸಿದೆ ಎಂದು ಬಿಜೆಪಿ ಸಂಸದ ಲಲ್ಲು ಸಿಂಗ್ ಅವರಿಗೆ ನೀಡಿದ ಉತ್ತರದಲ್ಲಿ ಪೋಖ್ರಿಯಾಲ್ ತಿಳಿಸಿದರು. ನೀಟ್ ಪರೀಕ್ಷೆಯು ಈ ವರ್ಷದ ಆ.1ರಂದು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ಪೆನ್ ಮತ್ತು ಪೇಪರ್ ವಿಧಾನದಲ್ಲಿ ನಡೆಯಲಿದೆ.
Next Story





