ಕೀರ್ತಿ ಕಿಶೋರ್ ಗೆ ಪಿ ಎಚ್ ಡಿ ಪದವಿ
ಕೊಣಾಜೆ: ಮಂಗಳೂರಿನ ಜೆಪ್ಪು ನಿವಾಸಿ ಕೀರ್ತಿಕಿಶೋರ್ ಎಸ್ ಇವರು 'ಟೀಮ್ ವರ್ಕ್ ಎಂಗೇಜ್ಮೆಂಟ್: ಲಿಂಕಿಂಗ್ ಟೀಮ್ ಇನ್ ಪು ಟ್ಸ್, ಟೀಮ್ ಪ್ರೊಸೆಸಸ್ ಆಂಡ್ ಟೀಮ್ ಔಟ್ ಕಮ್ಸ್' ವಿಷಯದಲ್ಲಿ ಮುಂಬಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಇವರು ಮಾನವಿಕ ( ಔದ್ಯೋಗಿಕ ಮನಶಾಸ್ತ್ರ) ವಿಭಾಗದ ಪ್ರೊ. ಮೀನಾಕ್ಷಿ ಗುಪ್ತ ಹಾಗೂ ಪ್ರೊ. ಪೂಜಾ ಪುರಂಗ್ ಮಾರ್ಗದರ್ಶನದಲ್ಲಿ ಪ್ರೌಡ ಪ್ರಬಂಧ ಸಿದ್ಧಪಡಿಸಿದ್ದರು. ಇವರು ಜೆಪ್ಪು ಮಹಾ ಕಾಳಿ ಪಡ್ಪು ನಿವಾಸಿಗಳಾದ ಶೇಖರ್ ಉಳ್ಳಾಲ್ ಹಾಗೂ ವಾರಿಜಾ ದಂಪತಿ ಪುತ್ರನಾಗಿದ್ದಾರೆ.
Next Story





