ಬಂಟ್ವಾಳ: 'ಟ್ರೆಂಡ್ ಲೀಡರ್ಸ್ ಮೀಟ್-21' ಕಾರ್ಯಕ್ರಮ

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಲೀಡರ್ಸ್ ಮೀಟ್-21 ಕಾರ್ಯಕ್ರಮವು ಲಯನ್ಸ್ ಕ್ಲಬ್ ಬಿಸಿ ರೋಡ್ ನಲ್ಲಿ ನಡೆಯಿತು.
ಟ್ರೆಂಡ್ ಜಿಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರೀಫ್ ಅಝ್ಹರಿ ದುಆ ನೆರವೇರಿಸಿದರು. ಅಫ್ಹಮ್ ಅಲಿ ತಂಙಳ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಟ್ರೆಂಡ್ ಕೇಂದ್ರ ಸಮಿತಿಯ ಅಂತರ್ ರಾಷ್ಟ್ರೀಯ ಪ್ರಾಜೆಕ್ಟ್ ಕಾರ್ಡಿನೇಟರ್ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರೆಂಡ್ ಕೇಂದ್ರ ಸಮಿತಿ ಚೈರ್ಮೆನ್ ರಶೀದ್ ಮಾಸ್ಟರ್ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಅಬ್ದುಲ್ ಖಾದರ್ ಮಾಸ್ಟರ್, ಕೋಶಾಧಿಕಾರಿ ಯು.ಪಿ ಬಶೀರ್ ಬೆಳ್ಳಾರೆ, ವೈಸ್ ಕನ್ವೀನರ್ ನಬ್ಸೀರ್, ಸಿದ್ದೀಕ್ ನಾವೂರ್, ಅಡ್ವಕೇಟ್ ನೌಶಾದ್ ಅನ್ಸಾರಿ, ಶಫೀಕ್ ಕಟ್ಟತ್ತಿಲ ಉಪಸ್ಥಿತರಿದ್ದರು.
ಜಿಲ್ಲಾ ಕನ್ವೀನರ್ ಅಬ್ದುಸ್ಸಲಾಂ ಸ್ವಾಗತಿಸಿದರು. ವೈಸ್ ಚೈರ್ಮೆನ್ ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





