ಶೋಪಿಯಾನ್ ಎನ್‌ಕೌಂಟರ್: ಜೈಶೆ ಕಮಾಂಡರ್ ಸಹಿತ ಇಬ್ಬರು ಶಂಕಿತ ಉಗ್ರರ ಹತ್ಯೆ
ಶೋಪಿಯಾನ್ (ಜಮ್ಮು ಹಾಗೂ ಕಾಶ್ಮೀರ), ಮಾ. 15: ಸೇನೆ ಶೋಪಿಯಾನ್‌ನಲ್ಲಿ ಸೋಮವಾರ ಮರು ಆರಂಭಿಸಿದ ಎನ್‌ಕೌಂಟರ್‌ನಲ್ಲಿ ಜೈಶೆ-ಮುಹಮ್ಮದ್ (ಜೆಇಎಂ) ಕಮಾಂಡರ್ ಸಜ್ಜಾದ್ ಅಫ್ಘಾನಿ ಹತನಾಗಿದ್ದಾನೆ.
ಈ ಎನ್‌ಕೌಂಟರ್‌ನಲ್ಲಿ ಇನ್ನೋರ್ವ ಶಂಕಿತ ಉಗ್ರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಯುಬಿಎಲ್ ಶೆಲ್‌ನೊಂದಿಗೆ ಎಕೆ 47 ಹಾಗೂ ಅಮೆರಿಕ ನಿರ್ಮಿತ ರೈಫಲ್‌ಗಳ ಎಂ-4 ಕಾರ್ಬೈನ್ ಪತ್ತೆಯಾಗಿದೆ. ಅಪ್ಘಾನಿಯನ್ನು ಹತ್ಯೆಗೈದಿರುವುದಕ್ಕೆ ಶೋಪಿಯಾನ್ ಪೊಲೀಸರು ಹಾಗೂ ಭದ್ರತಾ ಪಡೆಯನ್ನು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅಭಿನಂದಿಸಿದ್ದಾರೆ. ಭಯೋತ್ಪಾದನೆಗೆ ಯುವಕರನ್ನು ನೇಮಿಸುವಲ್ಲಿ ಅಪ್ಘಾನಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅವರು ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರಾವಲ್‌ಪೋರಾ ಪ್ರದೇಶದಲ್ಲಿ ಮಾರ್ಚ್ 13ರಂದು ಆರಂಭವಾಗಿತ್ತು. ಅಂದು ಓರ್ವ ಭಯೋತ್ಪಾದಕ ಹತನಾಗಿದ್ದ. ಸೋಮವಾರ ಈ ಎನ್‌ಕೌಂಟರ್ ಮರು ಆರಂಭವಾಗಿತ್ತು.
Next Story





