ಕ್ಷಯಮುಕ್ತ ಕರ್ನಾಟಕ: ಮಾ.24ರಂದು ಕೆಂಪು ದೀಪ ಬೆಳಗಿಸಲು ಆದೇಶ
ಬೆಂಗಳೂರು, ಮಾ.16: 2021ರ ಮಾ.24ರಂದು ಕ್ಷಯ ಮುಕ್ತ ಕರ್ನಾಟಕ ರಾಜ್ಯದ ಕಾರ್ಯತಂತ್ರದ ಯೋಜನೆಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆ ತಿಳಿಸಿದೆ.
ಈ ವರ್ಷದ ವಿಶ್ವ ಕ್ಷಯರೋಗ ದಿನವನ್ನು ಗುರುತಿಸಲು ಮತ್ತು ಕ್ಷಯ ಮುಕ್ತ ಕರ್ನಾಟಕದ ನಮ್ಮ ಪ್ರಯತ್ನಗಳನ್ನು ಪ್ರದರ್ಶಿಸಲು, ಟಿಬಿಯ ಹಾನಿಕಾರಕ ಪರಿಣಾಮದ ಬಗ್ಗೆ ಗಮನ ಸೆಳೆಯಲು ಮಾ.24ರಂದು ಪ್ರಮುಖ ಸ್ಮಾರಕಗಳು, ಡಿಸಿ ಕಚೇರಿಗಳು, ಸಾರ್ವಜನಿಕ ಆಸ್ಪತ್ರೆಗಳ ಕಟ್ಟಡಗಳಲ್ಲಿ ಕೆಂಪು ದೀಪವನ್ನು ಬೆಳಗಿಸಲು ಸರಕಾರ ನಿರ್ಧರಿಸಿದೆ.
Next Story





