ಕೇರಳ ಚುನಾವಣೆ: ಎನ್ ಡಿಎ ತೊರೆದ ಪಿ.ಸಿ. ಥಾಮಸ್ ನೇತೃತ್ವದ ಬಣ

ಪಿ.ಸಿ. ಥಾಮಸ್ (Photo source: deccanchronicle)
ಹೊಸದಿಲ್ಲಿ: ಪಿ.ಸಿ. ಥಾಮಸ್ ನೇತೃತ್ವದ ಬಣವು ಬಿಜೆಪಿ ನೇತೃತ್ವದ ಎನ್ ಡಿಎ ತೊರೆದಿದೆ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದೂ ಸೀಟು ಸಿಗದ ಕಾರಣ ಥಾಮಸ್ ನೇತೃತ್ವದ ಪಕ್ಷ ಮಂಗಳವಾರ ತಡರಾತ್ರಿ ಈ ನಿರ್ಧಾರ ತೆಗೆದುಕೊಂಡಿದೆ.
ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ 2003ರಿಂದ 2004ರ ತನಕ ಥಾಮಸ್ ಕೇಂದ್ರ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಈ ಬಾರಿ ಬಿಜೆಪಿ ಒಂದೂ ಸೀಟು ಕೊಡಲು ಸಿದ್ಧವಿಲ್ಲ. ತನ್ನ ಪಕ್ಷವು ಕೇರಳ ಕಾಂಗ್ರೆಸ್(ಜೋಸೆಫ್)ನೊಂದಿಗೆ ವಿಲೀನವಾಗಲಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್)ಭಾಗವಾಗಲಿದ್ದೇವೆ ಎಂದು ಥಾಮಸ್ ಹೇಳಿದ್ದಾರೆ.
Next Story





