ಕೋವಿಡ್ ನಿಯಮ ಪಾಲಿಸದವರಿಗೆ ದಂಡ ನಿಗದಿ: ಡಿಸಿ ಜಗದೀಶ್
ಉಡುಪಿ, ಮಾ.17: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್, ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ನಿಯಮಗಳನ್ನು ಪಾಲನೆ ಮಾಡದವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಇಲಾಖಾ ವಾರು ಅಧಿಕಾರಿ ಗಳಿಗೆ ಅಧಿಕಾರವನ್ನು ನೀಡಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ನಿಯಮಗಳನ್ನು ಪಾಲನೆ ಮಾಡದಿರುವವರಿಗೆ 100ರೂ. ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಸಿನಿಮಾ ಥಿಯೇಟರ್, ಮಾಲ್ಗಳು ಅಥವಾ ಅಂಗಡಿಗಳ ಆವರಣದಲ್ಲಿ ಮಾಲಕರು ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅಥವಾ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
ನಿಯಮ ಉಲ್ಲಂಘಿಸುವ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಪಾರ್ಟಿ ಹಾಲ್ ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್ಗಳಿಗೆ 5000ರೂ., ಹವಾ ನಿಯಂತ್ರಿತ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಶಾಪಿಂಗ್ ಮಾಲ್ಗಳಿಗೆ 10000ರೂ., ತ್ರಿಸ್ಟಾರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ವಾರ್ ಹೋಟೆಲ್‌ಗಳು, ಕನಿಷ್ಠ 500 ಜನರು ಸೇರಲು ಅವಕಾಶವಿರುವ ಮದುವೆ ಅಥವಾ ಕನ್‌ಲೆನ್‌ಷನ್ ಹಾಲ್ಗಳಿಗೆ 10000 ರೂ., ಸಾರ್ವಜನಿಕ ಸಮಾರಂಭಗಳ ಆಯೋಜಕರು, ರ್ಯಾಲಿಗಳು, ಗುಂಪು ಸೇರುವ ಅಥವಾ ಆಚರಣೆಗಳಿಗೆ 10ಸಾವಿರ ರೂ. ದಂಡ ವಿಧಿಸಲು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.







