ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಉಡುಪಿ, ಮಾ.17: ಕುಂಜಿಬೆಟ್ಟು ಕೆಇಬಿ ವಸತಿ ಗೃಹದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಮಾ.16ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.
ಮಂಡ್ಯ ಮೂಲದ ಪ್ರಸ್ತುತ ಅಜ್ಜರಕಾಡು ಕಿತ್ತೂರು ಚೆನ್ನಮ್ಮ ರಸ್ತೆಯ ನಿವಾಸಿ ಕೆ.ಎಸ್.ಗೌತಮ್ ಗೌಡ(23) ಹಾಗೂ ಬೆಳಗಾವಿ ಮೂಲದ ಪ್ರಸ್ತುತ ಮಣಿಪಾಲ ಕೆಎಂಸಿ ವಸತಿಗೃಹದ ಬಳಿಯ ವಿಜಯನಗರ ನಿವಾಸಿ ವಿಕ್ಕಿ ದಯಾಳ್ ಯಾನೆ ವಿಕ್ಕಿ(21) ಬಂಧಿತ ಆರೋಪಿಗಳು.
ಇವರಿಂದ ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ 1050 ಗ್ರಾಂ ತೂಕದ 30,000ರೂ. ಮೌಲ್ಯದ ಗಾಂಜಾ ಹಾಗೂ ಒಟ್ಟು 45,000ರೂ. ಮೌಲ್ಯದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





