ಹೊಳೆಯಲ್ಲಿ ಮೃತದೇಹ ಪತ್ತೆ
ಬ್ರಹ್ಮಾವರ, ಮಾ.17: ಕಚ್ಚೂರು ಗ್ರಾಮದ ಹಾಲೆಕೋಡಿ ಎಂಬಲ್ಲಿ ಹೊಯಿಗೆ ಧಕ್ಕೆಯ ಸಮೀಪ ಸೀತಾನದಿಯ ದಡದಲ್ಲಿ ಸುಮಾರು 45 ರಿಂದ 50ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಮಾ.17ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತದೇಹವು ಕೊಳೆತು ಹೋಗಿದ್ದು, ವ್ಯಕ್ತಿಯು ಸುಮಾರು 2-3 ದಿನಗಳ ಹಿಂದೆ ಹೊಳೆಯ ಬದಿಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹೊಳೆಯ ನೀರಿಗೆ ಹಾರಿ ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





