ತೆಂಕನಿಡಿಯೂರು ಗ್ರಾಪಂ ಮುಖ್ಯದ್ವಾರ ವಿವಾದ: ದೂರು ಪ್ರತಿದೂರು
ಮಲ್ಪೆ, ಮಾ.17: ತೆಂಕನಿಡಿಯೂರು ಮುಖ್ಯದ್ವಾರ ಬದಲಾಯಿಸಿರುವ ವಿಚಾರಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ದೂರು ಪ್ರತಿದೂರು ಗಳು ದಾಖಲಾಗಿವೆ.
ಗ್ರಾಪಂ ಸದಸ್ಯರಾದ ಸುರೇಶ್ ನಾಯಕ್, ಸತೀಶ್ ನಾಯಕ್, ಮೀನಾ ಪಿಂಟೋ, ಪೃಥ್ವಿರಾಜ್ ಶೆಟ್ಟಿ ಹಾಗೂ ವಿಷ್ಣುನಗರದ ಲಲಿತಾ ಆಚಾರ್ತಿ ಎಂಬವರು ಮಾ.16ರಂದು ಗ್ರಾಪಂ ಅಧ್ಯಕ್ಷೆ ಗಾಯತ್ರಿ ಕಚೇರಿಯಲ್ಲಿದ್ದಾಗ ಬಂದು ನಿಂದನೆ ಮಾಡಿ ಬೆದರಿಕೆ ಒಡ್ಡಿ ಆವಾಚ್ಯ ಶಬ್ದ ಬಳಸಿ ಬೈಯ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಹೇಳನಕಾರಿಯಾಗಿ ಮಾನಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿದೂರು: ಸಾಮಾನ್ಯ ಸಭೆಗಳಲ್ಲಿ ಯಾವುದೇ ನಿರ್ಣಯವನ್ನು ಮಾಡದೆ ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಏಕಾಏಕಿ ಕಾನೂನು ವಿರುದ್ದವಾಗಿ ಮಾಡಿರುವ ಮುಖ್ಯದ್ವಾರ ಬದಲಾಯಿಸುವ ಕಾಮಗಾರಿಯನ್ನು ಪ್ರಶ್ನಿಸಲು ಹೋದಾಗ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್, ಸದಸ್ಯರಾದ ಪ್ರಶಾಂತ್ ಹೆಬ್ಬಾರ್, ವಿನೋದ್, ಶರತ್ ಕುಮಾರ್ ಬೈಲಕೆರೆ, ಮಾಲಿನಿ, ಸತೀಶ್, ವಿಕೀತಾ ಸುರೇಶ್ ಸೇರಿ ಅವಾಚ್ಯವಾಗಿ ಬೈದು ಮೈಗೆ ಕೈ ಹಾಕಿ ಬೆದರಿಕೆ ನೀಡಿ ಹಲ್ಲೆಗೆ ಮುಂದಾಗಿರುವುದಾಗಿ ತಾಪಂ ಸದಸ್ಯ ಧನಂಜಯ್ ಕುಂದರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.







