ಮಾ.18-19: ಬದ್ರಿಯಾ ಜುಮಾ ಮಸೀದಿ ಜಲಾಲಿಯ್ಯ ಉದ್ಘಾಟನೆ

ಮಂಗಳೂರು, ಮಾ.17: ಬದ್ರಿಯಾ ಜುಮಾ ಮಸೀದಿ ಜಲಾಲಿಯ್ಯ, ಬಡಕಬೈಲುವಿನ ನೂತನ ಮಸೀದಿ ಉದ್ಘಾಟನಾ ಸಮಾರಂಭವು ಮಾ.18 ಮತ್ತು 19ರಂದು ನಡೆಯಲಿದೆ.
ಮಾ.18ರಂದು ಬೆಳಗ್ಗೆ 11 ಗಂಟೆಗೆ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಲಿ ದ್ದಾರೆ. ಅಲ್‌ಹಾಜ್ ಬಿ.ಕೆ. ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್, ಅಬ್ದುಲ್ ಜಲೀಲ್ ಮರಿಕ್ಕಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಗ್ರಿಬ್ ನಂತರ ಸ್ವಲಾತ್ ವಾರ್ಷಿಕ ಮತ್ತು ಜಲಾಲಿಯ್ಯ ದಿಕ್ರ್ ಕಾರ್ಯಕ್ರಮಗಳು ನಡೆಯಲಿದ್ದು, ಸೈಯದ್ ಕೆ.ಎಸ್. ಜಅಫರ್ ಸ್ವಾದಿಖ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ.
ಮಾ.19ರಂದು ಸುಬಹಿ ನಮಾಝ್ ನಂತರ ನಡೆಯಲಿರುವ ಬದ್ರ್ ವೌಲೀದ್ ಮಜ್ಲಿಸ್ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ನಿಝಾಮುದ್ದೀನ್ ಭಾಫಖಿ ತಂಙಳ್ ಮಲ್ಲೂರು ವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಜುಮ್ಮಾ ನಿರ್ವಹಣೆ ಮಾಡಲಿದ್ದಾರೆ.
ಮಗ್ರಿಬ್ ನಂತರ ಸಭಾ ಕಾರ್ಯಕ್ರಮ ಮತ್ತು ಬುರ್ದಾ ಮಜ್ಲಿಸ್ ನಡೆಯಲಿದೆ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಭಾಷಣಗೈಯಲಿದ್ದಾರೆ. ಸೈಯದ್ ತ್ವಾಹ ತಂಙಳ್ ಗಾಣೆಮಾರ್ ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







