ಮಾ.19-21: ಪಡುಮಲೆಯಲ್ಲಿ ಆಂಡ್ ನೇರ್ಚೆ, ಸೌಹಾರ್ದ ಸಂಗಮ
ಪುತ್ತೂರು : ಪಡುವನ್ನೂರು ಗ್ರಾಮದ ಪಡುಮಲೆ(ಪಮ್ಮಲ) ಜುಮಾ ಮಸೀದಿಯಲ್ಲಿ ವರ್ಷಂಪ್ರತಿ ನಡೆಯುವ ಆಂಡ್ ನೇರ್ಚೆ, 3 ದಿನಗಳ ಧಾರ್ಮಿಕ ಉಪನ್ಯಾಸ, ಕೂಟ್ ಪ್ರಾರ್ಥನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮಗಳು ಮಾರ್ಚ್ 19, 20 ಮತ್ತು 21ರಂದು ನಡೆಯಲಿದೆ ಎಂದು ಪಮ್ಮಲ ಜಮಾಅತ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ. 19ರಂದು ಅಪರಾಹ್ನ 2 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ರಾತ್ರಿ 8 ಗಂಟೆಗೆ ಮಾಡನ್ನೂರು ನೂರುಲ್ ಹುದಾ ಪ್ರಾಂಶುಪಾಲ ಸಯ್ಯದ್ ಬುರ್ಹಾನ್ ಆಲಿ ತಂಙಳ್ ಅಲ್ ಬುಖಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಮಾಅತ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬಹು ಕಬೀರ್ ಹಿಮಮಿ ಸಖಾಫಿ ಗೋಳಿಯಡ್ಕ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. 20ರಂದು ಶನಿವಾರ ರಾತ್ರಿ 8 ಗಂಟೆಗೆ ಬಹು ಸಮೀರ್ ದಾರಿಮಿ ಕೊಲ್ಲಂ, ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಾ. 21ರಂದು ಸಂಜೆ 5 ಗಂಟೆಗೆ ಜಿಲ್ಲಾ ವಕ್ಫ್ ಕಮಿಟಿಯ ಅಧ್ಯಕ್ಷ ಕಣಚೂರು ಮೋನು ಹಾಜಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಹೀದ್, ಕೆ.ಪಿ. ಅಹಮ್ಮದ್ ಹಾಜಿ ಆಕರ್ಷಣ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಮಹಮ್ಮದ್ ಬಡಗನ್ನೂರು ಅಧ್ಯಕ್ಷತೆ ವಹಿಸಲಿದ್ದು, ಖಲೀಲ್ ಹುದವಿ ಅಲ್ ಮಾಲಿಕಿ ಕಾಸರಗೋಡು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಮ್ಮಲ ಜಮಾಅತ್ ಖತೀಬ್ ಸಂಶುದ್ದೀನ್ ದಾರಿಮಿ, ಜಮಾಅತ್ ಉಪಾಧ್ಯಕ್ಷರಾದ ಫಕ್ರುದ್ದೀನ್ ಹಾಜಿ ಕೊಯಿಲ, ಮಾಜಿ ಕೋಶಾಧಿಕಾರಿ ಆದಂ ಹಾಜಿ ಡೆಂಬಳೆ, ಕಾರ್ಯದರ್ಶಿ ಆಲಿ ಕುಂಞಿ ಹಾಜಿ ಪಿಲಿಕುಡೆ ಉಪಸ್ಥಿತರಿದ್ದರು.







