‘ರಾಮಾಯಣ’ದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

ಫೋಟೊ ಕೃಪೆ: twitter.com/IAmit_K
ಹೊಸದಿಲ್ಲಿ: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲು ಕೆಲವೇ ದಿನಗಳ ಮುಂಚಿತವಾಗಿ 1987ರ ಪ್ರಸಿದ್ದ ಟಿವಿ ಕಾರ್ಯಕ್ರಮ 'ರಾಮಾಯಣ'ದಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರಿದ್ದಾರೆ.
ಗೋವಿಲ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಅವರು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಮಾರ್ಚ್ 27ರಿಂದ ಆರಂಭವಾಗಲಿರುವ 5 ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮೂಲದ ಗೋವಿಲ್ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
63ರ ವಯಸ್ಸಿನ ಅರುಣ್ ಗೋವಿಲ್ 1980ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಬಿಜೆಪಿ ‘ರಾಮಾಯಣ’ ಧಾರವಾಹಿಯಲ್ಲಿ ರಾವಣ(ಅರವಿಂದ್ ತ್ರಿವೇದಿ)ಹಾಗೂ ಸೀತಾ(ದೀಪಿಕಾ)ಪಾತ್ರವನ್ನು ನಿಭಾಯಿಸಿದವರಿಗೆ ಟಿಕೆಟ್ ನೀಡಿತ್ತು. ಇಬ್ಬರೂ ಸಂಸದರಾಗಿ ಆಯ್ಕೆಯಾಗಿದ್ದರು.
Next Story





