'ನಂಡೆ ಪೆಂಙಳ್' ನೂತನ ಅಧ್ಯಕ್ಷರಾಗಿ ಹಾಜಿ ಬಿ.ಎಮ್. ಮಮ್ತಾಝ್ ಅಲಿ ಕೃಷ್ಣಾಪುರ

ಮಂಗಳೂರು: ಪ್ರಾಯ ಮೂವತ್ತು ಮೀರಿದ ಸಹೋದರಿಯರ ಮದುವೆ ಯೋಜನೆ “ನಂಡೆ ಪೆಂಙಳ್” ಇದರ ನೂತನ ಅಧ್ಯಕ್ಷರಾಗಿ ಹಾಜಿ ಬಿ.ಎಂ ಮಮ್ತಾಝ್ ಅಲಿ ಕೃಷ್ಣಾಪುರ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಹಾಜಿ ಝಕರಿಯಾ ಜೋಕಟ್ಟೆ, ಸಲಹೆಗಾರರಾಗಿ ಎಸ್.ಎಂ ರಶೀದ್ ಹಾಜಿ, ಮುಹಮ್ಮದ್ ಶರೀಫ್ ಜೋಕಟ್ಟೆ ವೈಟ್ ಸ್ಟೋನ್ ಬಿಲ್ಡರ್ಸ್, ಎ.ಕೆ ನಿಯಾಝ್ ಎ.ಕೆ ಗ್ರೂಪ್, ಡಾ. ಅಬ್ದುಲ್ ರವೂಫ್ ಸುಲ್ತಾನ್, ಉಪಾಧ್ಯಕ್ಷರುಗಳಾಗಿ ಅಸ್ಗರ್ ಹಾಜಿ ಡೆಕ್ಕನ್ ಪ್ಲಾಸ್ಟ್, ಮುಹಮ್ಮದ್ ಹಾರಿಸ್ ಮುಕ್ಕ ಸೀ ಫುಡ್, ಅಶ್ರಫ್ ಕರ್ನಿರೆ ಎಕ್ಸ್‍ಪರ್ಟೈಸ್, ಎಸ್.ಎಂ ಮುಸ್ತಫಾ ಭಾರತ್ ಕನ್ ಸ್ಟ್ರಕ್ಸನ್ , ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್ ಆಝಾದ್ ಗ್ರೂಪ್, ಕೋಶಾಧಿಕಾರಿಯಾಗಿ ಅಬ್ದುಲ್ ರವೂಫ್ ಪುತ್ತಿಗೆ ವಿಶ್ವಾಸ್ ಬಿಲ್ಡರ್ಸ್, ಕಾರ್ಯದರ್ಶಿಗಳಾಗಿ ನಿಸಾರ್ ಮುಹಮ್ಮದ್, ಕೋಸ್ಟಲ್ ಫಿಶರೀಸ್ ಮತ್ತು ರಿಯಾಝ್ ಕಣ್ಣೂರು ಆಯ್ಕೆಯಾಗಿದ್ದಾರೆ.
ಸಂಘಟನಾ ಮತ್ತು ಸಂಪನ್ಮೂಲ ಕಾರ್ಯದರ್ಶಿಯಾಗಿ ನೌಷಾದ್ ಹಾಜಿ ಸೂರಲ್ಪಾಡಿ, ಪ್ರಚಾರ ಮುಖ್ಯಸ್ಥರಾಗಿ ರಫೀಕ್ ಮಾಸ್ಟರ್, ಪರಿಶೀಲನೆ ತಂಡದ ಮುಖ್ಯಸ್ಥರಾಗಿ ಸುಲೈಮಾನ್ ಶೇಖ್ ಬೆಳುವಾಯಿ, ಸಮೀಕ್ಷೆ ತಂಡದ ಮುಖ್ಯಸ್ಥರಾಗಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸಂಚಾಲಕರಾಗಿ ಮುಹಮ್ಮದ್ ಯು.ಬಿ, ಸುಲ್ತಾನ್ ಬಿಲ್ಡರ್ಸ್ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ನಕಾಶ್ ಬಾಂಬಿಲ ಆಯ್ಕೆಯಾಗಿದ್ದಾರೆ.
'ನಂಡೆ ಪೆಂಙಳ್' ಅಭಿಯಾನದಡಿಯಲ್ಲಿ 4 ವರ್ಷಗಳಲ್ಲಿ ಇಷ್ಟರಲ್ಲೇ 355 ಸಹೋದರಿಯರಿಗೆ ದಾಂಪತ್ಯ ಭಾಗ್ಯ ಲಭಿಸಿದೆ. (ಮಂಗಳೂರು ತಾಲೂಕು 154, ಬಂಟ್ವಾಳ ತಾಲೂಕು 109, ಪುತ್ತೂರು ತಾಲೂಕು 39, ಬೆಳ್ತಂಗಡಿ ತಾಲೂಕು 45 ಮತ್ತು ಸುಳ್ಯ ತಾಲೂಕು 8) ಫಲಾನುಭವಿಗಳ ಹೆಸರು, ಊರು, ಪ್ರಾಯ ಬಹಿರಂಗಪಡಿಸದೆ, ಅತ್ಯಂತ ಗುಪ್ತವಾಗಿ ಸಹಕರಿಸುವುದರ ಮೂಲಕ ಈ ಅಭಿಯಾನವು ಮುನ್ನಡೆಯುತ್ತಿದೆ.







