ಕಲಾಪ ಮುಂದೂಡಿದರೂ ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿ

ಬೆಂಗಳೂರು, ಮಾ.18: ರಾಜ್ಯ ಸರಕಾರವು ತಮ್ಮ ಕ್ಷೇತ್ರಗಳಿಗೆ ಅನುದಾನ ತಡೆ ಹಿಡಿದಿದೆ ಎಂದು ಸಿಟ್ಟಿಗೆದ್ದ ಜೆಡಿಎಸ್ ಶಾಸಕರು, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಗುರುವಾರ ಧರಣಿ ನಡೆಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರವನ್ನು ಪ್ರತಿಭಟಿಸಿ, ಶಾಸಕರು ಧರಣಿ ನಡೆಸಿದರು. ಅಲ್ಲದೆ, ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರೂ, ರಾಜ್ಯ ಸರಕಾರದಿಂದ ಸೂಕ್ತ ಉತ್ತರ ಸಿಗುವವರೆಗೆ ನಾವು ಧರಣಿ ಹಿಂಪಡೆಯುವುದಿಲ್ಲ. ಅಹೋರಾತ್ರಿ ಧರಣಿ ನಡೆಸುವುದಾಗಿ ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದಾರೆ.
ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿಗೆ ಮುಂದಾಗಿರುವುದರಿಂದ, ಅವರಿಗೆ ಅಗತ್ಯವಿರುವ ಹಾಸಿಗೆ, ಊಟದ ವ್ಯವಸ್ಥೆಯನ್ನು ಮಾಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.
Next Story





