ತಾಂಝಾನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮೀಹ ಹಸನ್ ನೇಮಕ

ಫೋಟೊ ಕೃಪೆ: //twitter.com/SaharaReporters
ಡೋಡೊಮಾ: ಮಿತಭಾಷಿಯ ಮುಸ್ಲಿಂ ಮಹಿಳೆ ಸಮೀಹ ಹಸನ್ ತಾಂಝಾನಿಯಾದ ಪ್ರಥಮ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷೆಯಾಗಿದ್ದ ಸಮೀಹ ಅವರು ಹಠಾತ್ತನೆ ನಿಧನರಾದ ಅಧ್ಯಕ್ಷ ಮಾಗುಫುಲಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
61 ರ ವಯಸ್ಸಿನ ಸಮೀಹ ಸಂವಿಧಾನದ ಅಡಿ ಮಾಗುಫುಲಿ ಅವರ ಉಳಿದ ಐದು ವರ್ಷದ ಅಧಿಕಾರವಧಿಯನ್ನು ಪೂರೈಸಲಿದ್ದಾರೆ. ಈ ಅವಧಿಯು 2025ರ ತನಕವಿದೆ.
ಮಾಜಿ ಆಫೀಸ್ ಕ್ಲರ್ಕ್ ಹಾಗೂ ಅಭಿವೃದ್ಧಿ ಕಾರ್ಯಕರ್ತೆಯಾಗಿದ್ದ ಸಮೀಹ 2000ರಲ್ಲಿ ರಾಜಕೀಯ ವೃತ್ತಿಜೀವನ ಆರಂಭಿಸಿದರು. ಮೈನ್ ಲ್ಯಾಂಡ್ ತಾಂಝಾನಿಯಾದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ಸಮೀಹ ಹಿರಿಯ ಸಚಿವಾಲಯಕ್ಕೆ ನಿಯೋಜಿತರಾಗಿದ್ದರು.
Next Story





