ಸುಧಾಕರ್ ಮನೆ ಎದುರು ಭದ್ರತಾ ಸಿಬ್ಬಂದಿ- ಚಾಲಕನ ನಡುವೆ ಮಾರಾಮಾರಿ

ಬೆಂಗಳೂರು, ಮಾ.19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಅವರ ಸದಾಶಿವನಗರದ ಮನೆ ಬಾಗಿಲ ಮುಂದೆಯೇ ಇಬ್ಬರ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಸುಧಾಕರ್ ಅವರ ಭದ್ರತಾ ಸಿಬ್ಬಂದಿ ತಿಮ್ಮಯ್ಯ ಎಂಬವರು ಚಾಲಕ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸೋಮಶೇಖರ್ ಅವರು ಸಚಿವರ ಮನೆಯ ಖಾಸಗಿ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕಳೆದ ಎರಡು ದಿನಗಳ ಹಿಂದೆ ಟೀ ಮಾರುವವನಿಗೆ ತಿಮ್ಮಯ್ಯ ಹಲ್ಲೆ ಮಾಡಿದ್ದ. ಈ ವಿಷಯವನ್ನು ಸಚಿವರಿಗೆ ಚಾಲಕ ಸೋಮಶೇಖರ್ ತಿಳಿಸಿದ್ದಾನೆ. ಇದರಿಂದಾಗಿ ಕುಪಿತಗೊಂಡ ಗನ್‍ಮ್ಯಾನ್ ತಿಮ್ಮಯ್ಯ, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
Next Story





