ಮುಳೂರು: ಡಾ.ಅಬ್ದುಲ್ ಕಲಾಮ್ ಸ್ಪೇಸ್ ಕ್ಲಬ್ ಉದ್ಘಾಟನೆ

ಕಾಪು, ಮಾ.19: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನ ಸಂಸ್ಥೆಯಾದ ಮುಳೂರು ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್‌ನಲ್ಲಿ ಎ.ಪಿ.ಜೆ.ಕಲಾಂ ಸ್ಪೇಸ್ ಕ್ಲಬ್‌ನ್ನು ರೋಟರಿ ಕ್ಲಬ್ ಮಣಿಪಾಲ ಘಟಕದ ಅಧ್ಯಕ್ಷ ಪ್ರಶಾಂತ್ ಹೆಗ್ಡೆ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಭೌತಶಾಸ್ತ್ರದ ಪ್ರಾಧ್ಯಾಪಕ ಅತುಲ್ ಭಟ್, ವಿದ್ಯಾರ್ಥಿಗಳಿಗೆ ದೂರದರ್ಶಕದ ಸಹಾಯದಿಂದ ಆಕಾಶ ಕಾಯಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಅಧ್ಯಯನದ ಬಗ್ಗೆ ಆಸಕ್ತಿ ಮೂಡಿಸಿದರು. ಇವರಿಗೆ ಸಹಾಯಕ ರಾಗಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಮೇಘನಾ ಜೆಪಿ ಹಾಗೂ ವಿದ್ಯಾರ್ಥಿಗಳಾದ ಹಾಶೀಮ್ ಮತ್ತು ಚೌಕಾಕ್ ಹೆಗ್ಡೆ ಸಹಕರಿಸಿದರು.
ಸಂಸ್ಥೆಯ ಸಂಚಾಲಕ ಅಡ್ವಕೇಟ್ ಮುಹಮ್ಮದ್ ಅಲಿ ಕಾಪು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೋಟರಿಯನ್ ಅಬ್ದುಲ್ ರಹಿಮಾನ್ ಮಣಿಪಾಲ, ಶ್ರೀಪತಿ ಪಿ. ಶುಭ ಹಾರೈಸಿದರು. ಸಂಸ್ಥೆಯ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ, ಆಡಳಿತ ಮಂಡಳಿಯ ಸದಸ್ಯರಾದ ವೈಬಿಸಿ ಬಶೀರ್ ಅಲಿ, ಅಬೂಬಕ್ಕರ್ ನೇಜಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಹಬೀಬುರ್ರಹಾನ್ ಕೆ.ಎಸ್. ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಪೂಜಾರಿ ವಂದಿಸಿದರು. ಸಹಶಿಕ್ಷಕ ರಾದ ಕಲಂದರ್ ಶಾಫಿ, ರಬ್ಬಾನಿ ಬಾಷ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕ ಸದಾಬ್ ಮುಲ್ಲ ಕಾರ್ಯಕ್ರಮ ಸಂಯೋಜಿಸಿ ದರು. ಶಿಕ್ಷಕ ಬಶೀರ್ ಎಂ., ಫಯಾಜ್ ಅಹಮದ್, ಸದ್ದಾಮ್ ಹುಸೇನ್ ಸಹಕರಿಸಿದರು.







