ಟಿಸಿಎಸ್-ಟೆಕ್‌ಬೈಟ್ ಕ್ವಿಝ್ ಸ್ಪರ್ಧೆ : ಎಜೆ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗೆ ಪ್ರಶಸ್ತಿ

ಮಂಗಳೂರು, ಮಾ.19: ಕರ್ನಾಟಕ ಸರಕಾರದ ಐಟಿ ಶಿಕ್ಷಣ ಗುಣಮಟ್ಟ ಮಂಡಳಿ (ಬಿಐಟಿಇಎಸ್) ಹಾಗೂ ಟಾಟಾ ಕಲ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಹಯೋಗದಲ್ಲಿ ಆಯೋಜಿಸಲಾಗಿದ್ದ 12ನೇ ಆವೃತ್ತಿಯ ಟಿಸಿಎಸ್-ಟೆಕ್‌ಬೈಟ್ ಕ್ವಿಝ್ ಸ್ಪರ್ಧೆಯ ಮಂಗಳೂರು ವಲಯ ಮಟ್ಟದ ಪ್ರಶಸ್ತಿಯನ್ನು ನಗರದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ಕೀಥ್ ಲೆನ್ನರ್ ಪಡೆದು ಕೊಂಡಿದ್ದಾರೆ.
ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹರ್ಷ ಸಿ.ಎಸ್. ದ್ವಿತೀಯ ಬಹುಮಾನ ಗೆದ್ದಿದ್ದಾರೆ. 12 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಗೆದ್ದಿರುವ ಕೀಥ್ ಲೆನ್ನರ್, ಮಾರ್ಚ್ 26ರಂದು ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿ ಸಲಿದ್ದಾರೆ.
ಮಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಗ್ರ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆ ಯಾಗಿದ್ದವು. ಈ ಸುತ್ತಿನಲ್ಲಿ ಬೈಟ್ ಅಬಂಡನ್ಸ್, ಟೆಕ್ ವಿಷನ್, ಬೈಟ್ ಕ್ಲೌಡ್ಸ್, ಕನೆಕ್ಟೆಡ್ ಇಕೋ ಸಿಸ್ಟಮ್ ಮತ್ತು ಟೆಕ್ ಅಜೈಲ್ ಎಂಬ ಐದು ಸುತ್ತುಗಳಿದ್ದವು ಎಂದು ಟಿಸಿಎಸ್ ಬೆಂಗಳೂರು ವಿತರಣಾ ಕೇಂದ್ರದ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮತ್ತು ಬೈಟ್ಸ್ ಅಧ್ಯಕ್ಷ ಡಾ. ಕೆ.ಎನ್. ಬಾಲಸುಬ್ರಮಣ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





