ತಾಂಝಾನಿಯ: ಮೊದಲ ಮಹಿಳಾ ಅಧ್ಯಕ್ಷರಾಗಿ ಸಮೀಹ ಸುಲುಹು ಪ್ರಮಾಣ

ಫೋಟೊ ಕೃಪೆ: //twitter.com/SaharaReporters
ದರ್ ಅಸ್ಸಲಾಮ್ (ತಾಂಝಾನಿಯ), ಮಾ. 19: ತಾಂಝಾನಿಯದ ಉಪಾಧ್ಯಕ್ಷೆ ಸಮೀಹ ಸುಲುಹು ಹಸನ್ ಶುಕ್ರವಾರ ದೇಶದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ದೇಶದ ಅಧ್ಯಕ್ಷ ಜಾನ್ ಮಗುಫುಲಿ ನಿಗೂಢ ಕಾಯಿಲೆಯಿಂದ ಮೃತಪಟ್ಟ ಬಳಿಕ, 61 ವರ್ಷದ ಮೃದುಭಾಷಿ ಮುಸ್ಲಿಮ್ ಮಹಿಳೆ ದೇಶದ ಮುಖ್ಯಸ್ಥೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮೃತ ಅಧ್ಯಕ್ಷರ ಎರಡನೇ ಐದು ವರ್ಷದ ಅವಧಿಯನ್ನು ಸಮಿಯಾ ಪೂರ್ಣಗೊಳಿಸಲಿದ್ದಾರೆ. ಅವರ ಅಧಿಕಾರಾವಧಿ 2025ರವರೆಗೆ ಇರುತ್ತದೆ.
ಜಾನ್ ಮಗುಫುಲಿ ಹೃದಯ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ ಎಂಬುದಾಗಿ ಸಮಿಯಾ ಗುರುವಾರ ಘೋಷಿಸಿದ್ದರು. ಆದರೆ ಅವರು ಕೊರೋನ ವೈರಸ್ನಿಂದಾಗಿ ಒಂದು ವಾರ ಮೊದಲೇ ಮೃತಪಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
Next Story





