ಗೃಹಿಣಿಯರಿಗೆ ಪಿಂಚಣಿ, ಯುವಕರಿಗೆ ಉದ್ಯೋಗ: ಚುನಾವಣಾ ಪ್ರಣಾಳಿಕೆಯಲ್ಲಿ ಕೇರಳ ಎಡರಂಗ ಮೈತ್ರಿಕೂಟದ ಭರವಸೆ

ತಿರುವನಂತಪುರ: ಕೇರಳದ ಆಡಳಿತಾರೂಢ ಎಡರಂಗ ಸರಕಾರವು ಎಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಶುಕ್ರವಾರ ತನ್ನ ಪ್ರಣಾಳಿಕೆಯನ್ನುಬಿಡುಗಡೆ ಮಾಡಿದ್ದು, ಗೃಹಿಣಿಯರಿಗೆ ಪಿಂಚಣಿ, ಯುವಕರಿಗೆ 40 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಮುಂದಿನ 5 ವರ್ಷಗಳಲ್ಲಿ 15,000 ಸ್ಟಾರ್ಟ್ ಅಪ್ ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಸಾಮಾಜಿಕ ಭದ್ರತಾ ಪಿಂಚಣಿಯನ್ನು ವಿವಿಧ ವಿಭಾಗಗಳಿಗೆ ಹಂತಹಂತವಾಗಿ ಈಗಿನ 1,600 ರೂ.ನಿಂದ 2,500 ರೂ. ಏರಿಕೆ ಮಾಡಲಾಗುವುದು, ರೈತರ ಆದಾಯವನ್ನು ಶೇ.50ರಷ್ಟು ಹೆಚ್ಚಿಸುವ ಭರವಸೆ ನೀಡಲಾಗಿದೆ.
900 ಅಂಶಗಳ ಪ್ರಣಾಳಿಕೆಯನ್ನು ಎಕೆಜಿ ಕೇಂದ್ರದಲ್ಲಿ ಎಲ್ ಡಿಎಫ್ ಸಂಚಾಲಕ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ವಿಜಯ ರಾಘವನ್, ಸಿಪಿಐ ಕಾರ್ಯದರ್ಶಿ ರಾಜೇಂದ್ರನ್ ಹಾಗೂ ಎಲ್ ಡಿ ಎಫ್ ನ ಇತರ ನಾಯಕರು ಇದ್ದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲಕ್ಕಾಡ್ ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಕಾರಣ ಈ ಸಂದರ್ಭದಲ್ಲಿ ಹಾಜರಿರಲಿಲ್ಲ.
Next Story





