ಗ್ರಾಪಂ ಚುನಾವಣೆ : ಎಲ್ಲಾ 47 ನಾಮಪತ್ರ ಕ್ರಮಬದ್ಧ
ಉಡುಪಿ, ಮಾ.20: ಜಿಲ್ಲೆಯ ಮೂರು ಗ್ರಾಪಂಗಳ ಒಟ್ಟು 14 ಸ್ಥಾನಗಳಿಗೆ ಮಾ.29ರಂದು ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಕೆ ಯಾಗಿರುವ ಎಲ್ಲಾ 47 ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರಗಳ ಪರಿಶೀಲನೆ ಇಂದು ನಡೆಯಿತು. ಬ್ರಹ್ಮಾವರ ತಾಲೂಕು ಕೋಡಿ ಗ್ರಾಪಂನ ಎಲ್ಲಾ 12 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 22 ಮಂದಿ ಪುರುಷರು ಹಾಗೂ 18 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 40 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಕುಂದಾಪುರ ತಾಲೂಕು ಕುಂಭಾಶಿ ಗ್ರಾಪಂನ ಒಂದು ಸ್ಥಾನಕ್ಕೆ ಮೂವರು ಹಾಗೂ ಕಾಪು ತಾಲೂಕು ಶಿರ್ವ ಗ್ರಾಪಂನ ಒಂದು ಸ್ಥಾನಕ್ಕೆ ನಾಲ್ವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಹಿಂದೆಗೆದುಕೊಳ್ಳಲು ಸೋಮವಾರ ಕೊನೆಯ ದಿನವಾಗಿದೆ. ಸಂಜೆಯ ವೇಳೆಗೆ ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಚಿತ್ರ ದೊರೆಯಲಿದೆ.
Next Story





