"ಒಬ್ಬ ಚಾಯ್ ವಾಲಾ ಅಲ್ಲದೇ ನಿಮ್ಮ ಸಮಸ್ಯೆಯನ್ನು ಯಾರು ಅರ್ಥೈಸಲು ಸಾಧ್ಯ?"
ಅಸ್ಸಾಂ ಚಹಾ ನೌಕರರನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿಕೆ

ಚಾಬುವಾ (ಅಸ್ಸಾಂ): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಸ್ಸಾಂನ ಚಾಬುವಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಚಹಾ ತೋಟ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ಭರವಸೆ ನೀಡಿದರು. “ಏಕ್ ಚಾಯ್ ವಾಲಾ, ಆಪ್ಕೆ ದರ್ದ್ ಕೋ ನಹಿ ಸಮ್ಜೇಗಾ ತೋ ಕೌನ್ ಸಮ್ಜೇಗಾ? ( ಓರ್ವ ‘ಚಾಯ್ ವಾಲಾ’ ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಇನ್ಯಾರು ಮಾಡುತ್ತಾರೆ?)” ಎಂದು ಪ್ರಧಾನಿ ʼಭಾವನಾತ್ಮಕವಾಗಿʼ ಪ್ರಶ್ನಿಸಿದರು.
ಅಸ್ಸಾಂ ಮತ್ತು ಅದರ ಜೀವಸೆಲೆಯಾದ ಚಹಾವನ್ನು ಅಪಖ್ಯಾತಿಗೊಳಿಸಲು ಟೂಲ್ಕಿಟ್ ತಯಾರಿಸುವ ಜನರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರು. "ಒಂದು ಕಾಲದಲ್ಲಿ ದೇಶದ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಕುಗ್ಗುತ್ತಿದೆ. ಕಾರಣ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಕಾಂಗ್ರೆಸ್‌ನಲ್ಲಿ ಪ್ರತಿಭೆಗಳಿಗೆ ಗೌರವವಿಲ್ಲ ಮತ್ತು ಅಧಿಕಾರಕ್ಕಾಗಿ ದುರಾಸೆಯು ಹೆಚ್ಚಾಗಿದೆ. ಅಧಿಕಾರಕ್ಕಾಗಿ, ಅವರು ಯಾರನ್ನಾದರೂ ತಮ್ಮೊಂದಿಗೆ ಕರೆದೊಯ್ಯಬಹುದು, ಅವರು ಯಾರನ್ನೂ ಬೆಂಬಲಿಸಬಹುದು" ಎಂದು ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





