Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರಾಜಾ ಕಾಲುವೆಯ ದುರಸ್ತಿ ಕಾರ್ಯ...

ರಾಜಾ ಕಾಲುವೆಯ ದುರಸ್ತಿ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರ ಬೇಜವಾಬ್ದಾರಿ ಪ್ರಶ್ನಾರ್ಹ: ವೆಲ್ಫೇರ್ ಪಾರ್ಟಿ

ವಾರ್ತಾಭಾರತಿವಾರ್ತಾಭಾರತಿ20 March 2021 9:15 PM IST
share
ರಾಜಾ ಕಾಲುವೆಯ ದುರಸ್ತಿ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರ ಬೇಜವಾಬ್ದಾರಿ ಪ್ರಶ್ನಾರ್ಹ: ವೆಲ್ಫೇರ್ ಪಾರ್ಟಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಪಾಂಡೇಶ್ವರದಲ್ಲಿನ ರಾಜಾ ಕಾಲುವೆಗೆ ಸೇರುವ ತ್ಯಾಜ್ಯ ನೀರು ಗಳನ್ನು ತಡೆಯುವ ಸಲುವಾಗಿ ಸಲ್ಲಿಸಿದ ಸಾರ್ವಜನಿಕರ ಸಲಹೆಗಳಿಗೆ ಕಿವಿಗೊಡುವ ವ್ಯವಧಾನ ಪಾಲಿಕೆಯ ಅಧಿಕಾರಿಗಳು ಮತ್ತು ಆಡಳಿತ ವರ್ಗದಲ್ಲಿ ಇಲ್ಲದೆ ಹೋದರೂ, ಕೊನೆಯ ಪಕ್ಷ ಕಾಲುವೆಯಲ್ಲಿನ ಎರಡೂ ಬದಿಗಳಲ್ಲಿರುವವುಗಳಲ್ಲಿನ ಗೋಡೆಗಳಲ್ಲಿ ಒಂದು ಬದಿಯನ್ನಾದರೂ ಸದ್ಯ ದುರಸ್ತಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಮನಪಾದವರು ಅದರ ಗುತ್ತಿಗೆ ನೀಡಿದ ಮಂದಿಗೆ ದುರಸ್ತಿಯ ನಂತರ ಅಲ್ಲಿ ಉಳಿಯುವ ಸಾಮಗ್ರಿಗಳನ್ನೂ ತೆರವುಗೊಳಿಸಲು ಹೇಳಲಿಲ್ಲವೇ ಅಥವಾ ಅದಕ್ಕೆ ಪ್ರತ್ಯೇಕ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆ ಮಾಡಬೇಕಾಗಿದೆಯೇ ಎಂಬುವುದಾಗಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಪ್ರಕಟಣೆಯಲ್ಲಿ ಪ್ರಶ್ನಿಸಿದರು.

ಅಲ್ಲಿನ ಕೆಲಸದಲ್ಲಿ ಸಾರ್ವಜನಿಕರ ನಿಜವಾದ ಬೇಡಿಕೆಯಾಗಿದ್ದ ಒಳಚರಂಡಿಯ ನೀರು, ಕಾಲುವೆಗೆ ಸೇರಿ ಹೊರಚರಂಡಿಯಾಗಿ ಹರಿಯುವುದ ರಿಂದ ಆಗುವ ಪರಿಸರದ ದುರ್ನಾತಕ್ಕೆ ಪರಿಹಾರವಾಗದಿದ್ದರೂ, ಕನಿಷ್ಠಪಕ್ಷ ಮಾಡಿರುವ ಬದಿಯ ಗೋಡೆಗಳ ದುರಸ್ತಿಯ ನಂತರ ಅಳಿದುಳಿದ ಸಾಮಗ್ರಿಗಳನ್ನೂ ಬೇಕಾಬಿಟ್ಟಿ ಎಸೆದಂತೆ ಬಿಟ್ಟಿದ್ದು ಇನ್ನೂ ತೆರವುಗೊಳಿಸದೆ  ಅಲ್ಲಿನ ನಿತ್ಯ ಪ್ರಯಾಣಿಕರುಗಳಾದ, ಸಾರ್ವಜನಿಕರಿಗೆ ಆಗುತ್ತಿ ರುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕಾಗಿದೆಯೆಂದರು.

ಇದು ಇಲ್ಲಿನ ಕಾಮಗಾರಿಯ ಗುತ್ತಿಗೆದಾರರ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದ್ದು, ಇಂದು ಸರಕಾರದಿಂದ  ಪಡೆಯುವ ಗುತ್ತಿಗೆದಾರರ ಇಷ್ಟೊಂದು ನಿರ್ಲಕ್ಷ್ಯತನ ಸಾಮಾನ್ಯವಾಗಿದ್ದು, ಇತ್ತೀಚಿಗೆ ವಿಟ್ಲ ಪೇಟೆಯಲ್ಲಿನ ರಸ್ತೆಯ ಡಾಮರೀಕರಣ ಕೆಲಸವನ್ನು ವಹಿಸಿಕೊಂಡಿದ್ದ ಜನಗಳು ಅಲ್ಲಿನ  ಶಾಲಾರಸ್ತೆ ಬದಿಯಲ್ಲಿ (ರಸ್ತೆಭಾಗ ಸೇರಿ) ಕಾರು ನಿಲುಗಡೆಗೊಳಿಸಿ ಹೋದವನನ್ನು ಕರೆಸಿ ಅದನ್ನು ತೆರವುಗೊಳಿಸುವ ಬದಲು ಅಷ್ಟೊಂದು ರಸ್ತೆಯ ಭಾಗದಲ್ಲಿ  ಡಾಮರು ಬಳಿಯದೆ ಬಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಷಯವನ್ನು ಉದಾಹರಿ ಸಿದ ಅವರು ಇಲ್ಲೆಲ್ಲಾ ಸರಕಾರಿ ಅಧಿಕಾರಿಗಳು ಇಂತಹ ಜನಗಳ ಅಸಮರ್ಪಕ ಕೆಲಸದ ಬಗ್ಗೆ ಕಣ್ಗಾವಲು ಮಾಡದೆ ಇರುವುದೇ ಸಮಸ್ಯೆಗಳಿಗೆ ಕಾರಣ, ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ  ತಕ್ಷಣ ಗಮನಹರಿಸಿ ಸರಿಪಡಿಸಬೇಕಾದ ಅಗತ್ಯವಿದೆಯೆಂದವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X