ಐರೋಪ್ಯ ಒಕ್ಕೂಟದ ಗೃಹ ಹಿಂಸೆ ಒಪ್ಪಂದದಿಂದ ಹೊರ ಬಂದ ಟರ್ಕಿ
ಅಂಕಾರ (ಟರ್ಕಿ), ಮಾ. 20: ಮಹಿಳೆಯರನ್ನು ರಕ್ಷಿಸುವ ಉದ್ದೇಶದ ಅಂತರ್‌ರಾಷ್ಟ್ರೀಯ ಒಪ್ಪಂದವೊಂದರಿಂದ ಟರ್ಕಿ ಹೊರಬಂದಿದೆ ಎಂದು ದೇಶದ ಅಧಿಕೃತ ಗಝೆಟ್ ಶನಿವಾರ ತಿಳಿಸಿದೆ.
ಟರ್ಕಿಯ ನಗರ ಇಸ್ತಾಂಬುಲ್‌ನಲ್ಲೇ ರೂಪುಗೊಂಡಿರುವ ‘ಕೌನ್ಸಿಲ್ ಆಫ್ ಯುರೋಪ್’ ಒಪ್ಪಂದವು ಗೃಹ ಹಿಂಸೆಯನ್ನು ತಡೆಯುವ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಹಾಗೂ ಸಮಾನತೆಯನ್ನು ಎತ್ತಿಹಿಡಿಯುವ ಉದ್ದೇಶವನ್ನು ಹೊಂದಿದೆ. ಈ ಒಪ್ಪಂದಕ್ಕೆ ಟರ್ಕಿ 2011ರಲ್ಲಿ ಸಹಿ ಹಾಕಿತ್ತು.
ಕಳೆದ ವರ್ಷ ಟರ್ಕಿಯಲ್ಲಿ ಮಹಿಳೆಯರ ಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಈ ಕ್ರಮದಿಂದಾಗಿ ಟರ್ಕಿಯು ಐರೋಪ್ಯ ಒಕ್ಕೂಟದ ಮೌಲ್ಯಗಳಿಂದ ಇನ್ನೂ ಒಂದು ಹೆಜ್ಜೆ ದೂರ ಸಾಗಿದೆ ಎಂದು ಟರ್ಕಿಯ ಈ ನಿರ್ಧಾರದ ಟೀಕಾಕಾರರು ಹೇಳುತ್ತಾರೆ.
Next Story





