ಬಿಜೆಪಿ ಉಳಿಯಬೇಕಾದರೆ ಮುಖ್ಯಮಂತ್ರಿ ಬದಲಾವಣೆ ಅಗತ್ಯ ಎಂದ ಶಾಸಕ ಯತ್ನಾಳ್

ವಿಜಯಪುರ, ಮಾ.20: ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ. ಬಿಜೆಪಿ ಉಳಿಯಬೇಕಾದರೆ ಸಿಎಂ ಬದಲಾವಣೆ ಅಗತ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಉಳಿಯಬೇಕಾದರೆ ಸಿಎಂ ಬದಲಾವಣೆ ಅಗತ್ಯ. ಅದು ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಿಗೆ ಗೊತ್ತಾಗಿದೆ. ಹೀಗಾಗಿ ಸಿಎಂ ಬದಲಾವಣೆ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ, ವಂಶ ರಾಜಕಾರಣದ ವಿರುದ್ಧ ಮಾತನಾಡಿದ್ದೇನೆ. ಇದು ತಪ್ಪಲ್ಲ ಎಂದ ಅವರು, ನನಗೆ ಒಂದುವರೆ ತಿಂಗಳ ಮೊದಲೇ ಶೋಕಾಸ್ ನೋಟಿಸ್ ಬಂದಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ, ವಾಜಪೇಯಿ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಅವರು ಕುಟುಂಬ ರಾಜಕಾರಣ ಮಾಡಿಲ್ಲ. ಹೀಗಾಗಿಯೇ ನಾನು ಆದರ್ಶದ ವಿಷಯದಲ್ಲಿ ಅವರ ಹೆಸರು ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದರು.
Next Story







