ಮಾ.26 ರಿಂದ 30 : ಅಜ್ಜಾವರ-ಮೇನಾಲ ಮುಖಾಂ ಉರೂಸ್
ಅಜ್ಜಾವರ: ಮೇನಾಲ ದರ್ಗಾ ಶರೀಫ್ ಉರೂಸ್ ಹಾಗೂ 5 ದಿನಗಳ ಧಾರ್ಮಿಕ ಪ್ರಭಾಷಣ ಮಾ.26 ರಿಂದ ಮಾ.30 ರವರೆಗೆ ನಡೆಯಲಿದೆ ಎಂದು ಅಜ್ಜಾವರ-ಮೇನಾಲ ಎಂ.ಜೆ.ಎಂ. ನ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ ಹೇಳಿದರು.
ಮಾ.20 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉರೂಸ್ ಕಾರ್ಯಕ್ರಮವು ಮಾ.26 ಮತ್ತು 27 ರಂದು ಅಜ್ಜಾವರ ಜುಮಾ ಮಸೀದಿ ವಠಾರದಲ್ಲಿ ಹಾಗೂ 28, 29, 30 ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ ಎಂದು ಹೇಳಿದರು.
ಮಾ.26 ರಂದು ರಾತ್ರಿ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಶೈಖುನಾ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾ ನೇತೃತ್ವ ವಹಿಸಿ ಉದ್ಘಾಟಿಸಲಿದ್ದಾರೆ. ಮಾ.27 ರಂದು ರಾತ್ರಿ ನಮ್ಮ ಪ್ರಯಾಣವು ಅಲ್ಲಾಹನಡೆಗೆ ಎಂಬ ವಿಷಯದ ಬಗ್ಗೆ ಜಾಫರ್ ಸ್ವಾದಿಕ್ ದಾರಿಮಿ ಪೊನ್ಮಲ ಉಪನ್ಯಾಸ ನೀಡಲಿದ್ದಾರೆ.
ಮಾ.28 ರಂದು ರಾತ್ರಿ ಮೇನಾಲ ದರ್ಗಾ ಶರೀಫಿನಲ್ಲಿ ಮಖಾಂ ಅಲಂಕಾರ ಮತ್ತು ದಿಕ್ರ್ ಹಲ್ಕ ನಡೆಯಲಿದೆ. ಕಾರ್ಯಕ್ರಮ ದ ನೇತೃತ್ವವನ್ನು ಸಯ್ಯದ್ ಹಕೀಂ ತಂಙಳ್ ಆದೂರು ವಹಿಸಲಿದ್ದಾರೆ. ರಾತ್ರಿ ಉಪನ್ಯಾಸ ಉದ್ಘಾಟನೆ ಜಾಫರ್ ಸ್ವಾದಿಕ್ ದಾರಿಮಿ ಪೊನ್ಮಲ ನೆರವೇರಿಸಲಿದ್ದು ನಂತರ ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು ಕೇರಳ ಉಪನ್ಯಾಸ ನೀಡಲಿದ್ದಾರೆ.
ಮಾ.29 ರಂದು ರಾತ್ರಿ ನಡೆಯುವ ಕಾರ್ಯಕ್ರಮ ದಲ್ಲಿ ಯು.ಕೆ. ಮುಹಮ್ಮದ್ ನಿಝಾಮಿ ಮೊಗ್ರಾಲ್ ಕುಟುಂಬ ಜೀವನ ಇಸ್ಲಾಮಿನಲ್ಲಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಾ.30 ರಂದು ನಡೆಯುವ ಸಮಾರೋಪ ಸಮಾರಂಭಕ್ಕೂ ಮೊದಲು ಸೌಹಾರ್ದ ಸಂಗಮ ನಡೆಯಲಿದೆ. ಸೌಹಾರ್ದ ಸಮಾರಂಭದಲ್ಲಿ ಖತೀಬ್ ಜಾಫರ್ ಸ್ವಾದಿಕ್ ದಾರಿಮಿ ಪೊನ್ಮಲ ದುವಾ ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಸ್ಥಳ ದಾನಿ ಗುಡ್ಡಪ್ಪ ರೈ ಮೇನಾಲ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೀಸ್ ಕೌಸರಿ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ.
ಸಮಾರೋಪ ದಲ್ಲಿ ಆತ್ಮ ಸಂರಕ್ಷಣೆ ಎಂಬ ವಿಷಯದಲ್ಲಿ ಅಬ್ದುಲ್ ಗಫೂರ್ ಮೌಲವಿ ಕೀಚೇರಿ ಕೇರಳ ಉಪನ್ಯಾಸ ನೀಡಲಿದ್ದಾರೆ. ಕೋವಿಡ್ ನಿಯಮ ಪಾಲಿಸುವ ನಿಟ್ಟಿನಲ್ಲಿ ಝಿಯಾರತ್ ಹಾಗೂ ಹರಕೆ ತಲುಪಿಸಲು ಹಗಲು ಹೊತ್ತಿನಲ್ಲಿ ಅವಕಾಶ ನೀಡಲಾಗಿದೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿ ಯಲ್ಲಿ ಎಂ.ಜೆ.ಎಂ. ಅಧ್ಯಕ್ಷ ಎ.ಪಿ. ಅಬ್ದುಲ್ಲ ಹಾಜಿ ಪಳ್ಳಿಕ್ಕರೆ, ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಕನ್ವಿನರಲ್ ರಫೀಕ್ ಮುಸ್ಲಿಯಾರ್ ಇದ್ದರು.







