ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್ ಆದ ಇಂಡಿಯಾ ಲೆಜೆಂಡ್ಸ್
ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಫೈನಲ್

Photo: Twitter
ರಾಯ್ಪುರ: ಆಲ್ ರೌಂಡರ್ ಗಳಾದ ಯೂಸುಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ಶತಕಾರ್ಧ ಕೊಡುಗೆಯ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ತಂಡ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ ಫೈನಲ್ ನಲ್ಲಿ 15 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಡಿಯಾ ಲೆಜೆಂಡ್ಸ್ ತಂಡ ಯೂಸೂಫ್ ಪಠಾಣ್ (ಔಟಾಗದೆ 62, 36 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ಯುವರಾಜ್ (60, 41 ಎಸೆತ, 4 ಬೌಂಡರಿ, 4ಸಿಕ್ಸರ್) ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 167 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಯೂಸುಫ್ ಪಠಾಣ್(2-26) ಹಾಗೂ ಇರ್ಫಾನ್ ಪಠಾಣ್ (2-29)ತಲಾ ಎರಡು ವಿಕೆಟ್ ಪಡೆದು ಶ್ರಿಲಂಕಾವನ್ನು ನಿಯಂತ್ರಿಸಿದರು. ಲಂಕೆಯ ಪರ ಸನತ್ ಜಯಸೂರ್ಯ 43 ರನ್, ಚಿಂಥಕ ಜಯಸಿಂಘೆ 40 ಹಾಗೂ ಕೌಶಲ್ಯ ವೀರರತ್ನೆ 38 ರನ್ ಗಳಿಸಿದರು.





