ಬಾಂಗ್ಲಾ: ಗ್ರಾಮದ ಮೇಲೆ ದಾಳಿ; ಮೂವರು ಶಂಕಿತರ ಬಂಧನ

ಢಾಕಾ,ಮಾ.21: ಬಾಂಗ್ಲಾದ ಸೋನಮ್‌ಗಂಜ್ ಜಿಲ್ಲೆಯಲ್ಲಿ ಹಿಂದೂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ನೌಗಾಂವ್ ಗ್ರಾಮದ ಮೇಲೆ ನಡೆದ ದಾಳಿ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೆಫಾಝತೆ ಇಸ್ಲಾಮ್ ಎಂಬ ಸಂಘಟನೆಗೆ ಸೇರಿದವರೆನ್ನಲಾದ ನೂರಾರು ಮಂದಿಯ ಗುಂಪೊಂದು ಸುನಾಮ್‌ಗಾನ್ ಜಿಲ್ಲೆಯಲ್ಲಿರುವ ನೌಗಾಂವ್ ಗ್ರಾಮದ ಮೇಲೆ ದಾಳಿ ನಡೆಸಿತೆಂದು ಆರೋಪಿಸಲಾಗಿದೆ. ಹೆಫಾಝತೆ ಇಸ್ಲಾಮ್ ಸಂಘಟನೆಯ ಜಂಟಿ ಕಾರ್ಯದರ್ಶಿ ಮೌಲಾನಾ ಮುಫ್ತಿ ಮುಮುನುಲ್‌ರ ಭಾಷಣವನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿರುವುದು ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸಿತ್ತೆನ್ನಲಾಗಿದೆ.
ಸುನಾಮ್‌ಗಾಮ್ ಜಿಲ್ಲೆಯ ದೆರಾಯ್ ಉಪಜಿಲ್ಲೆಯ ಗ್ರಾಮಗಳ ಮೇಲೆ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದಾರೆಂದು ಶಲ್ಲಾ ಪೊಲೀಸ್ ಠಾಣಾಧಿಕಾರಿ ನಝ್ಮುಲ್ ಹಕ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ಅವರು ಹೇಳಿದ್ದಾರೆ.
Next Story





