ಜಾಸ್ತಿ ಪಡಿತರ ಬಯಸಿದ್ದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು: ಉತ್ತರಾಖಂಡ ಮುಖ್ಯಮಂತ್ರಿ

ರಾಮನಗರ(ಉತ್ತರಾಖಂಡ): ಕೋವಿಡ್ ಸಾಂಕ್ರಾಮಿಕದ ಮಧ್ಯೆ ತಮ್ಮನ್ನು ತಾವು ಪೋಷಿಸಲು ಹೆಣಗಾಡುತ್ತಿದ್ದ ಬಡ ಕುಟುಂಬಗಳು ಕೇಂದ್ರ ಸರಕಾರದ ಯೋಜನೆಯಿಂದ ವಿತರಿಸುವ ಹೆಚ್ಚಿನ ಪಡಿತರವನ್ನು ಬಯಸಿದ್ದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ರವಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರತಿ ಮನೆಗೆ 5 ಕೆಜಿ ಪಡಿತರವನ್ನು ನೀಡಲಾಯಿತು. ಒಂದು ಮನೆಯಲ್ಲಿ 10 ಜನರಿದ್ದವರು 50 ಕೆಜಿ ಪಡೆದರೆ, 20 ಜನರಿಗೆ ಕ್ವಿಂಟಾಲ್(100 ಕೆಜಿ)ದೊರೆತಿದೆ. ಆದರೆ, ಇಬ್ಬರೇ ಇದ್ದವರು 10ಕೆಜಿ ಹಾಗೂ 20 ಜನರಿದ್ದವರು ಕ್ವಿಂಟಾಲ್ ಪಡೆದಾಗ ಕೆಲವರು ಅಸೂಯೆ ಪಟ್ಟರು. ನೀವು ಇಬ್ಬರಿಗೆ ಜನ್ಮ ನೀಡಿದ ಸಮಯದಲ್ಲಿ 20 ಮಕ್ಕಳಿಗೆ ಏಕೆ ಜನ್ಮ ನೀಡಲಿಲ್ಲ ಎಂದು ರಾವತ್ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ತಿಳಿಸಿದೆ.
ಮಾರ್ಚ್ 10ರಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿರುವ ರಾವತ್ ಕೇವಲ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.
Next Story





