ಮಾಜಿ ಶಿಕ್ಷಣ ಸಚಿವ ಬಿ.ಡಿ.ಬಸವರಾಜ್ ನಿಧನ

ಹಾಸನ, ಮಾ.22: ಮಾಜಿ ಶಿಕ್ಷಣ ಸಚಿವ, ಹಾಸನ ಜಿಲ್ಲೆಯ ಬಾಳ್ಳುಪೇಟೆ ನಿವಾಸಿ ಬಿ.ಡಿ.ಬಸವರಾಜ್(85) ಇಂದು ಮುಂಜಾನೆ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಇವರು, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಲವಾರು ಮುಖಂಡರನ್ನು ಬೆಳೆಸಿದ ನೇರ ನುಡಿಯ ನಾಯಕರಾಗಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಬಿಜೆಪಿ ಸೇರಿದ್ದರು. ಆದರೆ ಕಳೆದ ಒಂದೂವರೆ ದಶಕದಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.
Next Story





