ಮಣಿಯಂಪಾರೆ: ದುಷ್ಕರ್ಮಿಗಳಿಂದ ಸಂತ ಲಾರೆನ್ಸ್ ರ ಪ್ರತಿಮೆ ಧ್ವಂಸ
ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ

ಕಾಸರಗೋಡು, ಮಾ.22: ಮಣಿಯಂಪಾರೆಯ ಸಂತ ಲಾರೆನ್ಸ್ ಇಗರ್ಜಿಯ ಪರಿಸರದಲ್ಲಿದ್ದ ಸಂತ ಲಾರೆನ್ಸ್ ರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಕೃತ್ಯ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಗರ್ಜಿಗೆ ತೆರಳು ರಸ್ತೆ ಪಕ್ಕದಲ್ಲಿ ಸ್ಥಾಪಿಸಲ್ಪಟ್ಟಿರುವ ಲಾರೆನ್ಸ್ ರ ಪ್ರತಿಮೆಯನ್ನು ರವಿವಾರ ರಾತ್ರಿ ಕಲ್ಲೆಸೆದು ಧ್ವಂಸಗೊಳಿಸಲಾಗಿದೆ. ಗಾಜಿನ ಚೌಕಟ್ಟಿನ ಒಳಗಡೆಯಿದ್ದ ಪ್ರತಿಮೆಗೆ ಕಲ್ಲೆಸೆದ ಪರಿಣಾಮ ಗಾಜು ಪುಡಿಯಾಗಿದೆ. ಪ್ರತಿಮೆಯ ತಲೆಭಾಗ ತುಂಡಾಗಿ ಬಿದ್ದಿದೆ.
ಘಟನಾ ಸ್ಥಳಕ್ಕೆ ಬದಿಯಡ್ಕ ಠಾಣಾ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಚರ್ಚ್ ಆಡಳಿತ ಸಮಿತಿ ಒತ್ತಾಯಿಸಿದೆ
Next Story





