ಕಂಟೇನರ್ ನೊಳಗೆ ಸಿಲುಕಿ ಐವರು ಮಕ್ಕಳು ಮೃತ್ಯು

ಬಿಕಾನೇರ್: ರಾಜಸ್ಥಾನದ ಬಿಕಾನೇರ್ ನ ಹಿಮ್ಮತ್ ಸರ್ ಗ್ರಾಮದಲ್ಲಿ ರವಿವಾರ ಆಟವಾಡುತ್ತಿದ್ದ ಐವರು ಮಕ್ಕಳು ಧಾನ್ಯ ಸಂಗ್ರಹಣಾ ಕಂಟೇನರ್ ನೊಳಗೆ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕಂಟೇನರ್ ಬಹುತೇಕ ಖಾಲಿಯಾಗಿತ್ತು. ಮಕ್ಕಳು ಆಟವಾಡುತ್ತಿದ್ದಾಗ ಒಂದರ ನಂತರ ಒಂದರಂತೆ ಕಂಟೈನರ್ ನೊಳಗೆ ಜಿಗಿದಿದ್ದರು. ಕಂಟೈನರ್ ಆಕಸ್ಮಿಕವಾಗಿ ಮುಚ್ಚಲ್ಪಟ್ಟಿತು. ಮಕ್ಕಳು ಒಳಗೆ ಸಿಲುಕಿಕೊಂಡರು.
ಸೇವಾರಾಂ(4 ವರ್ಷ), ರವೀನಾ(7), ರಾಧಾ(5), ಪೂನಂ(8) ಹಾಗೂ ಮಾಲಿ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳು ಮೃತಪಟ್ಟಿರುವ ವಿಚಾರವನ್ನು ವೈದ್ಯರು ದೃಢಪಡಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ(ಬಿಕಾನೇರ್)ಪ್ರೀತಿ ಚಂದ್ರ ಹೇಳಿದ್ದಾರೆ.
ಮಕ್ಕಳ ತಾಯಂದಿರು ಮನೆಗೆ ಬಂದಾಗ ಮಕ್ಕಳು ಇರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿ ಕಂಟೈನರ್ ಮುಚ್ಚಳ ತೆರೆದು ನೋಡಿದಾಗ ಅದರೊಳಗೆ ಮಕ್ಕಳು ಇರುವುದು ಪತ್ತೆಯಾಗಿತ್ತು ಎಂದು ಪ್ರೀತಿ ತಿಳಿಸಿದರು.
Next Story





