ಸಿಎ ಅಂತಿಮ ಪರೀಕ್ಷೆ: ಉಪ್ಪಿನಂಗಡಿಯ ಮುಹಮ್ಮದ್ ತಾಬಿಶ್ ಹಸನ್ ಗೆ ರಾಷ್ಟ್ರ ಮಟ್ಟದಲ್ಲಿ 10ನೇ ರ‍್ಯಾಂಕ್

ಉಪ್ಪಿನಂಗಡಿ, ಮಾ.22: ದಿ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ ಕಳೆದ ಜನವರಿಯಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಮುಹಮ್ಮದ್ ತಾಬಿಶ್ ಹಸನ್ ರಾಷ್ಟ್ರ ಮಟ್ಟದಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.
ಇವರು 2019ರ ಡಿಸೆಂಬರ್ ನಲ್ಲಿ ಪುಣೆಯಲ್ಲಿ ನಡೆದ ಸಿಎ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಬಿಶ್ ಹಸನ್ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿಗೆ ಪಾತ್ರರಾಗಿದ್ದರು. 2020ರ ಫೆಬ್ರವರಿಯಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಸಿಎ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಪ್ಯಾನಲಿಸ್ಟ್ ಆಗಿ ಭಾರತವನ್ನು ಇವರು ಪ್ರತಿನಿಧಿಸಿದ್ದರು.
ಇವರು ಉಪ್ಪಿನಂಗಡಿಯ ಕೆ.ಮುಹಮ್ಮದ್ ಇಕ್ಬಾಲ್ ಮತ್ತು ತಸ್ಲೀಮಾ ಇಕ್ಬಾಲ್ ದಂಪತಿಯ ಪುತ್ರ.
Next Story





