ಮಾ.23ರಂದು ದ.ಕ ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣ ಜಾಗ್ರತಿ ಕಾರ್ಯಕ್ರಮ
ಮಂಗಳೂರು, ಮಾ.22:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ -19ನೆ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮಂಗಳವಾರ 10ರಿಂದ 12ಗಂಟೆಗೆ ಕೋವಿಡ್-19ರ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕೋವಿಡ್ ಇರುವ ಲಸಿಕೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 228 ಗ್ರಾಮ ಪಂಚಾಯತ್, ಹಾಗೂ 279ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಜನ ಜಾಗ್ರತಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಒಂದು ಗಂಟೆಯ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕಡೆ ಕೋವಿಡ್ -19 ರ ಮುನ್ನೆಚ್ಚರಿಕಾ ಕ್ರಮಗಳು ಬಗ್ಗೆ ಜನಸಾಮಾನ್ಯರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಸ್ಯಾನಿಟೈಸರ್ ಬಳಕೆಯ ಬಗ್ಗೆ ಸಭೆ ಸಮಾರಂಭಗಳಲ್ಲಿ ದೈಹಿಕ ಅಂತರ ಕಾಯ್ದಕೊಳ್ಳುವ ಬಗ್ಗೆ ಜಾಗ್ರತಿ ಮೂಡಿಸು ವುದು ಮುಖ್ಯ ಉದ್ದೇಶವಾಗಿದೆ.ಜೊತೆಗೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಲಾ ಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 740ಜನ ಕೋವಿಡ್ ನಿಂದ ಮ್ರತಪ ಟ್ಟಿರುತ್ತಾರೆ.ಹಾಲಿ 524_ಮಂದಿ ಕೋವಿಡ್ ಸೋಂಕಿನಿಂದ ಬಳಲುತ್ತಿ ದ್ದಾರೆ.ಈ ಪೈಕಿ 411ಜನ ರುಅವರ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಲ್ಲರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಸಾರ್ವಜನಿಕ ಸ್ಥಳ ಗಳಲ್ಲಿ ಮಾಸ್ಕ ಧಾರಣೆ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆ ಯ ನಿಯಮಗ ಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜ್ಯದ ಗಡಿ ಭಾಗವಾದ ತಲಪಾಡಿಯಲ್ಲಿ ಹಾಗೂ ಕೇರಳ -ಕರ್ನಾಟಕ ಗಡಿ ಪ್ರದೇಶದಲ್ಲಿ ಕೋವಿಡ್ ತಪಾಸಣೆಯ ಅಂಗವಾಗಿ ಸ್ವಾಬ್ ಟೆಸ್ಟ್ ನಡೆಯುತ್ತದೆ.ಆದರೆ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಆರ್ ಟಿ ಪಿ ಸಿ ಆರ್ ವರದಿಗಳಿಲ್ಲದ ಪ್ರಯಾಣಿಕ ರನ್ನು ಹಿಂದಕ್ಕೆ ಕಳುಹಿಸಲಾಗಿಲ್ಲ.ಗಡಿಪ್ರದೇಶದಲ್ಲಿ ಓಡಾಟ ನಡೆಸುವವರು ಆರ್ ಟಿ ಪಿ ಸಿಆರ್ ದಾಖಲೆ ಯೊಂದಿಗೆ ಪ್ರಯಾಣಿಸಲು ಸೂಚನೆ ನೀಡಲಾಗಿದೆ. ಎಪ್ರಿಲ್ ನಂತರ ಗಡಿ ಪ್ರದೇಶದಲ್ಲಿ ಕೋರೋನಾ ನಿಯಂತ್ರಣ ದ ಕಟ್ಟು ನಿಟ್ಟಿನ ಕ್ರಮಗಳನ್ನು ಇನ್ನಷ್ಟು ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್,ಅಪರ ಜಿಲ್ಲಾಧಿಕಾರಿ ರೂಪಾ,ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ರಾಮಚಂದ್ರ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.







