ಬೈಕ್ ಢಿಕ್ಕಿ: ಕರ್ತವ್ಯ ನಿರತರ ಪೊಲೀಸ್‌ಗೆ ಗಾಯ
ಮಣಿಪಾಲ, ಮಾ.22: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ವಾಹನ ಚಾಲಕ ಗಾಯಗೊಂಡ ಘಟನೆ ಮಾ.21ರಂದು ಸಂಜೆ 6ಗಂಟೆ ಸುಮಾರಿಗೆ ವಿದ್ಯಾರತ್ನ ನಗರದಲ್ಲಿನ ಸಿಂಡಿಕೇಟ್ ಸರ್ಕಲ್ ಡಿಸಿ ಕಛೇರಿ ಮುಖ್ಯ ರಸ್ತೆಯಲ್ಲಿ ಚರಕ ಜಂಕ್ಷನ್ ಬಳಿ ನಡೆದಿದೆ.
ಗಾಯಗೊಂಡವರನ್ನು ಇಲಾಖಾ ವಾಹನದ ಚಾಲಕ ಸತೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕೋಟ್ಪಾ ಕಾಯಿದೆಯಡಿಯಲ್ಲಿ ಕೇಸ್ ಹಾಕುತ್ತಿದ್ದ ವೇಳೆ ಬೈಕ್ ಸವಾರಿ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ, ಸತೀಶ್ ಶೆಟ್ಟಿಗೆ ಡಿಕ್ಕಿ ಹೊಡೆದನು. ಇದರಿಂದ ಪರಿಣಾಮ ಸವಾರ ಮತ್ತು ಸತೀಶ್ ಶೆಟ್ಟಿ ರಸ್ತೆಗೆ ಬಿದ್ದ ರೆನ್ನಲಾಗಿದೆ. ಈ ವೇಳೆ ಸವಾರ ತನ್ನ ಬೈಕ್ ಸಮೇತ ಪರಾರಿಯಾದನು. ಅಪಘಾತದಿಂದ ಸತೀಶ್ ಶೆಟ್ಟಿ ಗಾಯಗೊಂಡರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





