ಬೈಕ್ ಅಪಘಾತ: ವಿದ್ಯಾರ್ಥಿ ಸಾವು; ಮತ್ತೋರ್ವ ಗಂಭೀರ ಗಾಯ
ಪುತ್ತೂರು: ಬೈಕ್ ಅಪಘಾತಕ್ಕೀಡಾಗಿ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಪುತ್ತೂರಿನ ಖಾಸಗಿ ಕಾಲೇಜ್‍ನಲ್ಲಿ ಪದವಿ ವಿದ್ಯಾರ್ಥಿಯಾಗಿರುವ ಮಡಿಕೇರಿಯ ಸೋಮವಾರ ಪೇಟೆ ನಿವಾಸಿ ಬೋಜಪ್ಪ ಎಂಬವರ ಪುತ್ರ ಚೇತನ್ (20) ಮೃತಪಟ್ಟ ವಿದ್ಯಾರ್ಥಿ. ಆತನ ಸ್ನೇಹಿತ ಸುಳ್ಯ ತಾಲೂಕಿನ ಬೆಳ್ಳಾರೆ ಪೆರುವಾಜೆ ಗ್ರಾಮದ ಗೊಂಡೆಪಾಡಿ ನಿವಾಸಿ ನಾರಾಯಣ ಎಂಬವರ ಪುತ್ರ ಸುದೀಪ್(20) ಗಾಯಗೊಂಡವರು. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





