ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೊಲೆಗೆ ಯತ್ನ: 14 ಉಗ್ರರಿಗೆ ಮರಣ ದಂಡನೆ

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ಢಾಕಾ (ಬಾಂಗ್ಲಾದೇಶ), ಮಾ. 23: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು 2000ನೇ ವರ್ಷದಲ್ಲಿ ಹತ್ಯೆಗೈಯಲು ಪ್ರಯತ್ನಿಸಿದ ಪ್ರಕರಣದಲ್ಲಿ 14 ಭಯೋತ್ಪಾದಕರಿಗೆ ದೇಶದ ನ್ಯಾಯಾಲಯವೊಂದು ಮಂಗಳವಾರ ಮರಣ ದಂಡನೆ ವಿಧಿಸಿದೆ.
‘‘ಈ ತೀರ್ಪಿಗೆ ಮೇಲ್ಮನವಿ ನ್ಯಾಯಾಲಯಗಳು ತಡೆ ವಿಧಿಸದಿದ್ದರೆ, ಗುಂಡು ಹಾರಿಸಿ ಕೊಲ್ಲುವ ಮೂಲಕ ತೀರ್ಪನ್ನು ಜಾರಿಗೊಳಿಸಬೇಕು. ಇದು ಇತರರಿಗೆ ಪಾಠವಾಗಬೇಕು’’ ಎಂದು ರಾಜಧಾನಿ ಢಾಕಾದ ತ್ವರಿತ ಗತಿ ನ್ಯಾಯಮಂಡಳಿಯ ನ್ಯಾಯಾಧೀಶ ಅಬು ಝಾಫರ್ ಮುಹಮ್ಮದ್ ಕಮರುಸ್ಮಾನ್ ಘೋಷಿಸಿದರು.
ಶಿಕ್ಷೆಗೊಳಗಾಗಿರುವ ಎಲ್ಲರೂ ನಿಷೇಧಿತ ಹರ್ಕತುಲ್ ಜಿಹಾದ್ ಬಾಂಗ್ಲಾದೇಶ್ ಸಂಘಟನೆಗೆ ಸೇರಿದವರು.
ಶಿಕ್ಷೆಯ ಪ್ರಮಾಣ ಘೋಷಣೆಯಾದಾಗ 9 ದೋಷಿಗಳು ನ್ಯಾಯಾಲಯದಲ್ಲಿದ್ದರು. ಉಳಿದ ಐವರು ತಪ್ಪಿಸಿಕೊಂಡಿದ್ದಾರೆ.
2000 ಜುಲೈ 21ರಂದು ಅಂದಿನ ಪ್ರಧಾನಿ ಶೇಖ್ ಹಸೀನಾ ಚುನಾವಣಾ ಭಾಷಣ ಮಾಡಬೇಕಾಗಿದ್ದ ಕೊಟಾಲಿಪಾರ ಮೈದಾನದ ಸಮೀಪ ದೋಷಿಗಳು 76 ಕಿಲೋಗ್ರಾಮ್ ಬಾಂಬ್ ಇರಿಸಿದ್ದರು ಎಂದು ಆರೋಪಿಸಲಾಗಿದೆ.
Next Story





