ದೇಶದಲ್ಲಿ ಒಂದೇ ದಿನ 40,715 ಕೊರೋನ ಪ್ರಕರಣಗಳು ದಾಖಲು: 199 ಮಂದಿ ಮೃತ್ಯು
ಆರೋಗ್ಯ ಸಚಿವಾಲಯ ಹೇಳಿಕೆ

ಹೊಸದಿಲ್ಲಿ, ಮಾ. 23: ದೇಶದಲ್ಲಿ ಕಳೆದ ಒಂದೇ ದಿನದಲ್ಲಿ 40,715 ಕೊರೋನ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,16,86,796ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 13ನೇ ದಿನವೂ ಏರಿಕೆಯಾಗಿದ್ದು, 3,45,377ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳ ಶೇ. 2.96 ಇದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 95.67ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ಅಪ್‌ಲೋಡ್ ಮಾಡಿದ ದತ್ತಾಂಶ ತಿಳಿಸಿದೆ. ಇಂದು 199 ಮಂದಿ ಸಾವನ್ನಪ್ಪುವ ಮೂಲಕ ದೇಶದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,60,166ಕ್ಕೆ ಏರಿಕೆಯಾಗಿದೆ ಎಂದು ಅದು ಹೇಳಿದೆ.
ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 1,11,81,253ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮರಣ ಪ್ರಮಾಣ 1.37ಕ್ಕೆ ಇಳಿಕೆಯಾಗಿದೆ ಎಂದು ದತ್ತಾಂಶ ಹೇಳಿದೆ. ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ ಆಗಸ್ಟ್ 7ರಂದು 20 ಲಕ್ಷ, ಆಗಸ್ಟ್ 23ರಂದು 30 ಲಕ್ಷ, ಸೆಪ್ಟಂಬರ್ 5ರಂದು 40 ಲಕ್ಷ, ಸೆಪ್ಟಂಬರ್ 16ರಂದು 50 ಲಕ್ಷ ದಾಟಿತ್ತು. ಅದು ಸೆಪ್ಟಂಬರ್ 8ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 11.80 ಲಕ್ಷ, ನವೆಂಬರ್ 20ರಂದು 90 ಲಕ್ಷ ಹಾಗೂ ಡಿಸೆಂಬರ್ 19ರಂದು 1 ಕೋಟಿ ದಾಟಿತ್ತು. ಮಾರ್ಚ್ 22ರ ವರೆಗೆ 23,54,13,233 ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಸೋಮವಾರ 9,67,459 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಹೇಳಿದೆ.







