ಭಗತ್ ಸಿಂಗ್, ಸುಖ್‍ದೇವ್, ರಾಜ್‍ಗುರು ಹುತಾತ್ಮ ದಿನಾಚರಣೆ
ಬೆಂಗಳೂರು, ಮಾ. 23: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ 91ನೆ ಹುತಾತ್ಮ ದಿನವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‍ಎಸ್) ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಆಚರಿಸಲಾಯಿತು.
ಮಂಗಳವಾರ ಬೆಳಗ್ಗೆ ಭಗತ್ ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಹುತಾತ್ಮ ದಿನದ ಅಂಗವಾಗಿ ಕಾಲೇಜು ಹಾಗೂ ವಿವಿಧ ಬಡಾವಣೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು ಅವರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜೊತೆಗೆ ಅವರ ಜೀವನ ಮತ್ತು ಹೋರಾಟದ ಹಾದಿಯ ಕುರಿತು ಚರ್ಚೆ ಏರ್ಪಡಿಸಲಾಗಿತ್ತು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಈ ಮಹಾನ್ ಚೇತನರ ಕುರಿತ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನ ಮತ್ತು ಪುಸ್ತಕ ಮಾರಾಟ ಹಮ್ಮಿಕೊಳ್ಳಲಾಗಿತ್ತು. ಆ ಮೂಲಕ ಸಮಾಜದ ಅವರ ವಿಚಾರಧಾರೆಗಳನ್ನು ಎಲ್ಲ್ಲ ವರ್ಗದವರಿಗೂ ಪ್ರಚಾರ ಮಾಡುವ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಸಮಿತಿ ಕಾರ್ಯದರ್ಶಿ ಎ.ಶಾಂತಾ, ಸಿಂಧೂರಿ, ರುಕ್ಮಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





