ಮಾ. 26 : ಬಾಲಕೃಷ್ಣ ಶಿಬಾರ್ಲರ ತುಳು ನಾಟಕ ‘ಕಾಪ’ ಬಿಡುಗಡೆ

ಉಡುಪಿ, ಮಾ.24: ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಬರೆದಿರುವ ತುಳು ನಾಟಕ ‘ಕಾಪ’ ಉಡುಪಿಯ ಅಜ್ಜರಕಾಡು ಬಯಲು ರಂಗಮಂದಿರದಲ್ಲಿ ಮಾ.26ರ ಸಂಜೆ 6:30ಕ್ಕೆ ಬಿಡುಗಡೆಗೊಳ್ಳಲಿದೆ.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಮಾ.22ರಿಂದ 28ರವರೆಗೆ ನಡೆಯಲಿರುವ ‘ರಂಗಹಬ್ಬ’ದ ಐದನೇ ದಿನ ‘ಕಾಪ’ ಬಿಡುಗಡೆಗೊಳ್ಳುತ್ತಿದೆ. ಖ್ಯಾತ ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಕೃತಿ ಅನಾವರಣಗೊಳಿಸಲಿದ್ದಾರೆ.
ದಾವಣಗೆರೆಯಲ್ಲಿ ಪ್ರಜಾವಾಣಿ ವರದಿಗಾರರಾಗಿರುವ ಬಾಲಕೃಷ್ಣ ಅವರ ಎರಡನೇ ಕೃತಿ ಇದಾಗಿದೆ. ಅವರ ಚಾಕ್ಯಬಾಬಾ ಮಕ್ಕಳ ಕಥೆಗಳು ಕೃತಿ ಕೆಲವರ್ಷಗಳ ಹಿಂದೆ ಬಿಡುಗಡೆಯಾಗಿತ್ತು.
Next Story





