ಪದವಿ ಪರೀಕ್ಷೆ: ಎಂಜಿಎಂಗೆ ನಾಲ್ಕು ರ್ಯಾಂಕುಗಳು

ವೈಷ್ಣವಿ, ಕಮಲೇಶ್ ಶೆಣೈ, ಹುದಾ ಫಾತಿಮಾ, ಶೇಖ್ ಅಬ್ದುಲ್ ಝಾಹಿದ್
ಉಡುಪಿ, ಮಾ.24: ಮಂಗಳೂರು ವಿವಿ 2019-20ನೇ ಸಾಲಿನಲ್ಲಿ ನಡೆಸಿದ ವಿವಿಧ ಪದವಿ ಪರೀಕ್ಷೆಗಳಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು ನಾಲ್ಕು ರ್ಯಾಂಕ್ಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
ಬಿ.ಸಿ.ಎ. ಪದವಿ ಪರೀಕ್ಷೆಯಲ್ಲಿ ಕಾಲೇಜಿನ ವೆಷ್ಣವಿ ಕೆದ್ಲಾಯ ಎಚ್. ಅವರು 95.24 ಶೇ. ಅಂಕಗಳೊಂದಿಗೆ ಏಳನೇ ರ್ಯಾಂಕ್ನ್ನು ಪಡೆದಿದ್ದರೆ, ಹುದಾ ಫಾತಿಮಾ ಅಹ್ಮದ್ ಅವರು 94.86ಶೇ. ಅಂಕಗಳೊಂದಿಗೆ ಒಂಭತ್ತನೇ ರ್ಯಾಂಕ್ ಪಡೆದಿದ್ದಾರೆ.
ಕಮಲೇಶ್ ಶೆಣೈ ಬಿ. ಅವರು ಬಿಎಸ್ಸಿ (ಎಂಪಿಸಿ) ಅಂತಿಮ ಪರೀಕ್ಷೆಯಲ್ಲಿ ಒಟ್ಟು 95.58ಶೇ. ಅಂಕಗಳೊಂದಿಗೆ ಎಂಟನೇ ರ್ಯಾಂಕ್ ಪಡೆದಿದ್ದರೆ, ಶೇಖ್ ಅಬ್ದುಲ್ ಝಾಹಿದ್ ಅವರು ಅಂತಿಮ ಬಿಕಾಂನಲ್ಲಿ ಶೇ.93.20 ಅಂಕಗಳೊಂದಿಗೆ ಒಂಭತ್ತನೇ ರ್ಯಾಂಕ್ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





