ಉಡುಪಿ: ಮಾಸ್ಕ್ ಧರಿಸದವರಿಂದ 41ಸಾವಿರ ರೂ. ದಂಡ ವಸೂಲಿ
ಉಡುಪಿ, ಮಾ.24: ಜಿಲ್ಲೆಯಲ್ಲಿ ಕೋವಿಡ್-19 ಎರಡನೆ ಅಲೆ ನಿಯಂತ್ರಿ ಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಮಾ.23ರಂದು ಒಂದೇ ದಿನ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ವರಿಂದ ಒಟ್ಟು 41ಸಾವಿರ ರೂ. ದಂಡ ವಸೂಲಿ ಮಾಡಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 4000 ರೂ., ಪಂಚಾಯತ್ ವ್ಯಾಪ್ತಿಯಲ್ಲಿ 5300ರೂ., ಅಬಕಾರಿ ಇಲಾಖೆಯಿಂದ 2400 ರೂ., ಕಂದಾಯ ಇಲಾಖೆಯಿಂದ 9900ರೂ., ಪೊಲೀಸ್ ಇಲಾಖೆಯಿಂದ 19,400ರೂ. ದಂಡ ವಸೂಲಿ ಮಾಡಲಾಗಿದೆ.
ನಗರಸೆ,ಪುರಸೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 4000 ರೂ., ಪಂಚಾಯತ್ ವ್ಯಾಪ್ತಿಯಲ್ಲಿ 5300ರೂ., ಅಬಕಾರಿ ಇಲಾಖೆಯಿಂದ 2400 ರೂ., ಕಂದಾಯ ಇಲಾಖೆಯಿಂದ 9900ರೂ., ಪೊಲೀಸ್ ಇಲಾಖೆಯಿಂದ 19,400ರೂ. ದಂಡ ವಸೂಲಿ ಮಾಡಲಾಗಿದೆ. ಈವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 23629 ಮಂದಿಯಿಂದ 25,21,500ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Next Story





