ಕಾಪು ಮಾರಿ ಜಾತ್ರೆಯಲ್ಲಿ ಆರು ಮಕ್ಕಳ ರಕ್ಷಣೆ

ಉಡುಪಿ, ಮಾ.24: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಶಂಕರಪುರ ವಿಶ್ವಾಸದ ಮನೆ, ಜಿಲ್ಲಾ ನಾಗರಿಕ ಸೇವಾ ಸಮಿತಿ ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ ಕಾಪು ಮಾರಿ ಜಾತ್ರೆಯಲ್ಲಿ ಭಿಕ್ಷಾಟನೆ ಮತ್ತು ಬಲೂನು ಮಾರಾಟ ಮಾಡುತಿದ್ದ 6 ಮಕ್ಕಳ ರಕ್ಷಿಸಲಾಗಿದೆ.
ಜಾತ್ರೆಯಲ್ಲಿ ಗದಗ ಮೂಲದ 5 ಮಕ್ಕಳು ಮತ್ತು ಮದ್ಯ ಪ್ರದೇಶದ 1 ಬಾಲಕ ಸೇರಿ 6 ಮಕ್ಕಳನ್ನು ರಕ್ಷಿಸಲಾ ಯಿತು. ಇದರಲ್ಲಿ 5 ಬಾಲಕಿಯರು 1 ಬಾಲಕ ಸೇರಿದ್ದಾರೆ. ಇವರನ್ನು ಭಿಕ್ಷಾಟನೆ ಮತ್ತು ಬಲೂನು ಮಾರಾಟ ದಿಂದ ಮುಕ್ತ ಗೊಳಿಸಿ ಜಾತ್ರೆಯಲ್ಲಿ ಬಾಲ ಕಾರ್ಮಿಕ ಭಿಕ್ಷಾಟನೆ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲಾಯಿತು. ಮಕ್ಕಳನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕಾರ್ಮಿಕ ಅಧಿಕಾರಿ ಕುಮಾರ್, ಕಾಪು ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅಂಬಿಕಾ, ಸಮಾಜ ಕಾರ್ಯಕರ್ತೆ ಸುರಕ್ಷಾ, ಸಂದೇಶ, ಶಿಕ್ಷಣ ಇಲಾಖೆಯ ಸಿಆರ್‌ಪಿ ಸುಧೀರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಶಿಕಲಾ, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ, ವಿಶ್ವಾಸದ ಮನೆ ಉಪಧ್ಯಕ್ಷ ಮ್ಯಾಥ್ಯು, ಬಾರಕೂರು ಕಾಲೇಜಿನ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ ಗಳಾದ ದೀಪಾ, ಕ್ರಿಸ್ಟಿನ, ಆಶಾ, ರವೀಂದ್ರ ಪಾಲ್ಗೊಂಡಿದ್ದರು.







