ಉಡುಪಿ: ದಿನದಲ್ಲಿ 5803 ಮಂದಿಯಿಂದ ಲಸಿಕೆ ಸ್ವೀಕಾರ
ಉಡುಪಿ, ಮಾ.24: ಕೊರೋನಕ್ಕೆ ಸದ್ಯ ಲಭ್ಯವಿರುವ ಲಸಿಕೆಯನ್ನು ಬುಧವಾರ ಒಟ್ಟು 5803 ಮಂದಿ ಸ್ವೀಕರಿಸಿದ್ದಾರೆ. ಇವರಲ್ಲಿ ಒಟ್ಟು 5441 ಮಂದಿ ಮೊದಲ ಡೋಸ್‌ನ್ನು, 362 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ದಿನದಲ್ಲಿ 60 ಮೇಲ್ಪಟ್ಟ 4253 ಮಂದಿ ಹಿರಿಯ ನಾಗರಿಕರೊಂದಿಗೆ, 45ರಿಂದ 59 ವರ್ಷದೊಳಗಿನ ಬೇರೆ ಬೇರೆ ರೋಗದಿಂದ ನರಳುವ 3892 ಮಂದಿ ಈ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 42,071 ಮಂದಿ ಹಿರಿಯ ನಾಗರಿಕರು ಹಾಗೂ 7121 ಮಂದಿ 45-59 ವಯೋಮಾನದವರು ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 221 ಮಂದಿ ಮೊದಲ ಡೋಸ್‌ನ್ನು (ಒಟ್ಟು 21,045) ಪಡೆದರೆ, 268 ಮಂದಿ ಎರಡನೇ ಡೋಸ್‌ನ್ನು (ಒಟ್ಟು 15,363)ಸ್ವೀಕರಿಸಿದ್ದಾರೆ.
ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 75 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3759 ಆಗಿದೆ. ಅಲ್ಲದೇ 94 ಮಂದಿ ಎರಡನೇ ಡೋಸ್ ಪಡೆದಿದ್ದು ಇವರ ಒಟ್ಟು ಸಂಖ್ಯೆ 1800 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 73,996 ಮಂದಿ ಲಸಿಕೆಯ ಮೊದಲ ಡೋಸ್‌ನ್ನೂ, 17,163 ಮಂದಿ ಎರಡನೇ ಡೋಸ್‌ನ್ನು (ಒಟ್ಟು 91,159) ಪಡೆದಿ ದ್ದಾರೆ ಎಂದು ಡಾ.ಸೂಡ ವಿವರಿಸಿದರು.







