ಮಾ.27ರಂದು ರಂಗಭೂಮಿಯಿಂದ ವಿಶ್ವರಂಗಭೂಮಿ ದಿನಾಚರಣೆ

ಉಡುಪಿ, ಮಾ.24: ಜಿಲ್ಲೆಯ ಪ್ರತಿಷ್ಠಿತ ರಂಗಸಂಸ್ಥೆಯಾದ ರಂಗಭೂಮಿ ಉಡುಪಿ ಇದೇ ಮಾ.27ರಂದು ವಿಶ್ವರಂಗಭೂಮಿ ದಿನಾಚರಣೆಯನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಂಜೆ 6 ಗಂಟೆಗೆ ಆಚರಿಸಲಿದೆ.
ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಂಗಳೂರಿನ ಧರ್ಮರಾಜ್ ಉದ್ಘಾಟಿಸಲಿದ್ದಾರೆ. ಮೈಸೂರಿನ ಪಿ.ಅರ್ಮುಗಂ, ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿಯ ಹಿರಿಯ ಪ್ರಸಾಧನ ಕಲಾವಿದ ಸೋಮನಾಥ ಚಿಟ್ಪಾಡಿ ಹಾಗೂ ಹಿರಿಯ ಸಾಹಿತಿ, ರಂಗ ಸಂಘಟಕ ಮೇಟಿ ಮುದಿಯಪ್ಪಇವರಿಗೆ ಕ್ರಮವಾಗಿ 2020 ಹಾಗೂ 2021ನೇ ಸಾಲಿನ ವಿಶ್ವರಂಗಭೂಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಕೋಶಿಕಾ ಚೇರ್ಕಾಡಿ ತಂಡದಿಂದ ರಾಮಚಂದ್ರ ದೇವ ಇವರ ‘ಕುದುರೆ ಬಂತು ಕುದುರೆ’ ಎಂಬ ನಾಟಕ ರೋಹಿತ್ ಬೈಕಾಡಿ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಭೂಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.





