ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಬೀದಿ ನಾಟಕ

ಉಡುಪಿ, ಮಾ.24: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇವರ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿ ಸಮನ್ವಯ ಟ್ರಸ್ಟ್ ಶಿವಮೊಗ್ಗ ಇವರಿಂದ ಸಾರ್ವಜನಿಕರು ಹಾಗೂ ಫಲಾನುಭವಿಗಳಿಗೆ ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಹೆಚ್ಚಿನ ಜಾಗೃತಿ ಶಿಕ್ಷಣ ನೀಡುವ ಸಲುವಾಗಿ ಬೀದಿ ನಾಟಕವನ್ನು ಸಿಟಿ ಬಸ್ ನಿಲ್ದಾಣದ ಬಳಿ ಪ್ರದರ್ಶಿಸಲಾಯಿತು.
ಪೋಷಣ್ ಅಭಿಯಾನ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಂತೆ ಪೌಷ್ಠಿಕತೆ ಮತ್ತು ಆರೋಗ್ಯ ಉತ್ತಮ ಪಡಿಸುವಲ್ಲಿ ಇಲಾಖೆಯ ಸೇವೆಗಳು ಸೇರಿದಂತೆ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಿಸುವಿಕೆ, ಗರ್ಭಿಣಿ ಬಾಣಂತಿ ಪೌಷ್ಠಿಕತೆಗೆ ಪ್ರಾಮುಖ್ಯತೆ, ಸ್ತನ್ಯಪಾನದ ಮಹತ್ವ, ರಕ್ತಹೀನತೆ ತಡೆಗಟ್ಟುವುದು, ಆರು ತಿಂಗಳವರೆಗೆ ಕೇವಲ ಸ್ತನ್ಯಪಾನ, ಆರು ತಿಂಗಳ ನಂತರ ಪೂರಕ ಪೌಷ್ಠಿಕ ಆಹಾರ, ಸಂಪೂರ್ಣ ಲಸಿಕಾ ಕಾರ್ಯಕ್ರಮಗಳು ಸೇರಿದಂತೆ ದಿನನಿತ್ಯದ ಸ್ವಚ್ಛತೆ, ಬಾಲ್ಯವಿವಾಹ ನಿಷೇಧ ಹಾಗೂ ಅಂಗನವಾಡಿಗಳಲ್ಲಿನ ಸೇವೆಗಳ ವಿಷಯಗಳ ಕುರಿತಂತೆ ಅರಿವು ಮೂಡಿಸಲಾಯಿತು.
ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಬನ್ನಂಜೆ ವಾರ್ಡ್ ಕೌನ್ಸಿಲರ್ ಸವಿತಾ ಹರೀಶ್ ರಾಮ್, ಪೋಷಣ್ ಅಭಿಯಾನ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.





