ಮೆದುಳಿನ ಫಂಗಸ್ ಸೋಂಕು: ನೆರವಿನ ನಿರೀಕ್ಷೆಯಲ್ಲಿ ಕುಟುಂಬ

ಕಾರ್ಕಳ, ಮಾ.24: ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನಿಗೆ ಇದೀಗ ಮೆದುಳಿನ ಫಂಗಸ್ ಇನ್ಫೆಕ್ಷನ್ ಎಂಬ ಅಪಾಯಕಾರಿ ರೋಗವು ಜೊತೆಯಾಗಿದ್ದು, ಈಗಾಗಲೇ ಲಕ್ಷಾಂತರ ಹಣ ವ್ಯಯಿಸಿರುವ ಕುಟುಂಬಕ್ಕೆ ಎರಡನೇ ಆಘಾತ ಎದುರಾಗಿದೆ.
ಅಜೆಕಾರು ದೆಪ್ಪುತ್ತೆ ಮರ್ನೆ ಗ್ರಾಮದ ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಇರ್ಫಾನ್(35) ಮೆದುಳಿನ ಫಂಗಸ್ ಇನ್ಫೆಕ್ಷನ್ ಕಾಯಿಲೆ ಯಿಂದ ಬಳಲುತಿತಿದ್ದು, ಮಂಗಳೂರಿನ ಯೆನೆಪೋಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ 22 ದಿನಗಳ ಮೊದಲು ಕೊಯಂಬತ್ತೂರು ಕಿಡ್ನಿ ಸ್ಪೆಷಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇವರು 8 ವರ್ಷಗಳ ಹಿಂದೆ ತಮ್ಮ 2 ಕಿಡ್ನಿಗಳ ವೈಫಲ್ಯಕ್ಕೆ ಒಳಗಾಗಿ 3 ವರ್ಷಗಳ ಕಾಲ ಡಯಾಲಿಸಿಸ್ ಚಿಕಿತ್ಸೆಗೆ ಒಳಪಟ್ಟಿದ್ದರು. ಬಳಿಕ ಇವರ ತಾಯಿಯ 1 ಕಿಡ್ನಿಯನ್ನು ಇವರಿಗೆ ಕಸಿ ಮಾಡಲಾಗಿತ್ತು.
ನಂತರ ಪ್ರತಿ 2 ತಿಂಗಳಿಗೊಮ್ಮೆ ಕೊಯಂಬತ್ತೂರು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಬೇಕಾಗಿತ್ತು. ಇವರಿಗೆ ಮದುವೆಯಾಗಿ 4 ವರ್ಷಗಳಾಗಿದ್ದು, 2 ವರ್ಷದ ಮತ್ತು 7 ತಿಂಗಳಿನ ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಇರ್ಫಾನ್ನ ಚಿಕಿತ್ಸೆಗಾಗಿ ಈಗಾಗಲೇ 45 ಲಕ್ಷ ರೂ. ವ್ಯಯಿಸಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಫೋನ್ ಪೇ: 9148389863, ಹಸನ್: 95917 46074, ಅಬೂಬಕ್ಕರ್: 9901627925 ಇವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ. ಖತೀಜಾ, ಯೂನಿಯನ್ ಬ್ಯಾಂಕ್ ಅಜೆಕಾರ್, ಅಕೌಂಟ್ ನಂಬರ್: 520101229428785, ಐಎಫ್‌ಎಸ್‌ಸಿ: ಯುಬಿಐಎನ್ 0900982.







