ವ್ಯವಹಾರದ ಹಣ ನೀಡದೆ ವಂಚನೆ ಆರೋಪ : ದೂರು
ಕುಂದಾಪುರ, ಮಾ.24: ವ್ಯವಹಾರದ ಹಣ ವಾಪಾಸ್ಸು ನೀಡದೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕುಂದಾಪುರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮೋದ ತಲ್ಲೂರು, ಬೆಂಗಳೂರಿನ ನಾಗರಬಾವಿ ನಿವಾಸಿ ಸುಷ್ಮಾ ಎಂಬವರ ಜೊತೆ ಪಾಲುದಾರಿಕೆ ಮಾಡಿ ಕೊಂಡು ಕಾರು ವ್ಯವಹಾರ ಮಾಡುವು ದಾಗಿ ತಲ್ಲೂರು ಉಪ್ಪಿನಕುದ್ರುವಿನ ನಾಗೇಶ್ ರಾಮ ಚಂದನ್‌ಗೆ ತಿಳಿಸಿದ್ದರು. ಈ ವ್ಯವಹಾರದಲ್ಲಿ ಹಣ ತೊಡಗಿಸಿದರೆ ಶೇ.20 ಲಾಭವನ್ನು ಪಡೆಯಬಹುದು ಎಂದು ಪ್ರಮೋದ್, ನಾಗೇಶ್‌ರನ್ನು ನಂಬಿಸಿದ್ದರು. ಅದರಂತೆ 2019 ಮಾ.13 ರಿಂದ ಈವರೆಗೆ ಒಟ್ಟು 29,12,212ರೂ. ಹಣವನ್ನು ಪ್ರಮೋದ್ ಖಾತೆಗೆ ಜಮಾ ಮಾಡಿದ್ದರು. ಅದರಲ್ಲಿ 21,38,712ರೂ. ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





