ಬಿಟ್‌ಕಾಯಿನ್ ಮೂಲಕ ಟೆಸ್ಲಾ ಕಾರು ಖರೀದಿಸಬಹುದು: ಎಲಾನ್ ಮಸ್ಕ್

ಲಾಸ್ ಏಂಜಲಿಸ್ (ಅಮೆರಿಕ), ಮಾ. 24: ಇನ್ನು ತನ್ನ ಕಂಪೆನಿಯ ಇಲೆಕ್ಟ್ರಿಕ್ ವಾಹನಗಳನ್ನು ಬಿಟ್‌ಕಾಯಿನ್ ಮೂಲಕ ಖರೀದಿಸಬಹುದಾಗಿದೆ ಎಂದು ಅಮೆರಿಕದ ಟೆಸ್ಲಾ ಇಂಕ್ ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್ ಬುಧವಾರ ಹೇಳಿದ್ದಾರೆ. ಈ ಆಯ್ಕೆಯು ಅಮೆರಿಕದ ಹೊರಗೆ ಈ ವರ್ಷದ ಕೊನೆಯ ವೇಳೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
‘‘ಇನ್ನು ಮುಂದೆ ನೀವು ಟೆಸ್ಲಾ ವಾಹನಗಳನ್ನು ನೀವು ಬಿಟ್‌ಕಾಯಿನ್ ಮೂಲಕ ಖರೀದಿಸಬಹುದು’’ ಎಂಬುದಾಗಿ ಅವರು ಬುಧವಾರ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ, ಟೆಸ್ಲಾಕ್ಕೆ ಪಾವತಿಸಲಾದ ಬಿಟ್‌ಕಾಯಿನನ್ನು ಸಾಂಪ್ರದಾಯಿಕ ಕರೆನ್ಸಿಗೆ ಪರಿವರ್ತಿಸಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ತಾನು 1.5 ಬಿಲಿಯ ಡಾಲರ್ ವೌಲ್ಯದ ಬಿಟ್‌ಕಾಯಿನ್ ಖರೀದಿಸಿದ್ದು, ಶೀಘ್ರದಲ್ಲೇ ಅದನ್ನು ಕಾರು ಖರೀದಿಗೆ ಪಾವತಿ ವಿಧಾನವಾಗಿ ಮಾಡಲಾಗುವುದು ಎಂಬುದಾಗಿ ಕಳೆದ ತಿಂಗಳು ಟೆಸ್ಲಾ ಹೇಳಿತ್ತು. ಅದರ ಬೆನ್ನಿಗೇ ಬಿಟ್‌ಕಾಯಿನ್ ಮೌಲ್ಯ ಈಗ ಗಗನಕ್ಕೇರಿದೆ.
Next Story





